ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Must Read

ಸಿಂದಗಿ: ಕಾಂಗ್ರೆಸ್ ಪಕ್ಷವನ್ನು ಭೂತ್ ಮಟ್ಟದಿಂದ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ವರಿಷ್ಠರ ಆದೇಶದ ಮೇರೆಗೆ ರಾಜ್ಯ ಮಟ್ಟದಿಂದ ಗ್ರಾಮೀಣ ಮಟ್ಟದ ವರೆಗೆ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.

ಮತಕ್ಷೇತ್ರದ ಮಲಘಾಣ ಭೂತ ನಂ. 106 ರಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದು ಕ್ಷೇತ್ರದಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ದೇಶ ಕಟ್ಟುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ ಅಲ್ಲದೆ ಪಕ್ಷದ ಸಂಘಟನೆಗೆ ತಮ್ಮ ಪ್ರಾಣವನ್ನೆ ಮುಡುಪಾಗಿಟ್ಟ ಪಕ್ಷವಾಗಿದೆ ಅದಕ್ಕೆ ಪಕ್ಷದ ಸದಸ್ಯರೆಂದರೆ ಕಾಂಗ್ರೆಸ್ ನ ಶಕ್ತಿ ಈ ದೇಶದ ಶಕ್ತಿ ಎಂದರು.

ಇದೆ ಸಂಧರ್ಭದಲ್ಲಿ ಎಸ್ ಸಿ /ಎಸ್ ಟಿ ಘಟಕ ಅಧ್ಯಕ್ಷ ಪರಶುರಾಮ ಕಾಂಬಳೆ, ಕಾಂಗ್ರೆಸ್ ಮುಖಂಡರಾದ ಸಂತೋಷ ಹರನಾಳ, ನೂರಹಮ್ಮದ ಅತ್ತಾರ, ಮಹೇಶ ಮನಗೂಳಿ, ಬಸವರಾಜ ಕಾಂಬಳೆ, ಅನಿಲಕುಮಾರ ಕುಮಸಗಿ, ಲಕ್ಷ್ಮಿಕಾಂತ ಚಾವರ, ಮಲಘಾಣ ಗ್ರಾಮದ ಕಾಂಗ್ರೆಸ ಮುಖಂಡರಾದ ರಾವುತಗೌಡ ಬಿರಾದಾರ, ಮೈಬೂಬ್‍ಸಾಬ್ ಆಲಮೇಲ, ವಿಠ್ಠಲ ಕೇಡಿ, ದಾವಲಸಾಬ ಬಡೆಗಾರ, ನಿಂಗಪ್ಪ ಠಕ್ಕಾ, ಸಾತವೀರಪ್ಪ ಬಿರಾದಾರ, ಮಹ್ಮದ್ ಖಾಜೇಸಾಬ್ ಬಡೆಗಾರ, ಶೇಕಪ್ಪ ಮನ್ನಾಪುರ, ಚಂದಾ ಬುಡ್ಡಾ ಬಳುರಗಿ, ದಾವಲತರಾಯ ಬಿರಾದಾರ, ರಸೂಲ್‍ಸಾಬ್ ಜೇರಟಗಿ, ಇಸ್ಮಾಯಿಲ್ ಯಾಳಗಿ, ನಮಾಜ್ ಗಾಬಸವಳಾಗಿ, ಗಪುರಸಾಬ ಮೈನಾಳ ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group