Homeಸುದ್ದಿಗಳುಮೇಲುಕೋಟೆಯ ಎಸ್ ಕುಮಾರ್ ಗೌರವ ಡಾಕ್ಟರೇಟ್ ಗೆ ಭಾಜನ 

ಮೇಲುಕೋಟೆಯ ಎಸ್ ಕುಮಾರ್ ಗೌರವ ಡಾಕ್ಟರೇಟ್ ಗೆ ಭಾಜನ 

     ಅಮೆರಿಕನ್ ವಿಸ್ಡಂ ಪೀಸ್ ಯುನಿವರ್ಸಿಟಿ, ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿ ಸಹಯೋಗದಲ್ಲಿ ತಮಿಳುನಾಡು ಹೊಸೂರಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ  ಸಂಶೋಧನಾ ಸಂಸ್ಥೆಯ ಆಡಳಿತ ಕುಲಸಚಿವ ಎಸ್ ಕುಮಾರ್ ರವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಸಂಪನ್ಮೂಲ  ವ್ಯಕ್ತಿಯಾಗಿ  ಎಸ್ ಕುಮಾರ್ ರವರು ಕಳೆದ ಮೂರು ದಶಕದಿಂದ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಾಣಿಜ್ಯ ಶಾಸ್ತ್ರದಲ್ಲಿ ಮತ್ತು ಸಂಸ್ಕೃತ ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಲವಾರು  ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಆಚಾರ್ಯ ರಾಮಾನುಜರ ತಪೋಭೂಮಿ ಮೇಲುಕೋಟೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತ ಸುವರ್ಣ ಮಹೋತ್ಸವ ಹೊಸ್ತಿಲಲ್ಲಿರುವ  ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯಲ್ಲಿ ಪ್ರಾಚೀನ ತಾಳೆಗರಿ ಹಸ್ತಪ್ರತಿ ಸಂರಕ್ಷಣೆಯನ್ನು ಮಾಡಿ ಡಿಜಿಟಲೀಕರಣ ಮಾಡುವ ನಿಟ್ಟಿನಲ್ಲಿ ಕುಮಾರ್ ಅವರ ಪಾತ್ರ ಹಿರಿದಾದದ್ದು .ಹಲವಾರು ವಿದ್ವತ್ಪೂರ್ಣ ಸಂಶೋಧನಾ ಗ್ರಂಥಗಳ ಸಂಪಾದಕರಾಗಿ ಸಾರಸ್ವತ  ಕೈಂಕರ್ಯ  ಮಾಡುತ್ತ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.

ವೇದಿಕೆಯಲ್ಲಿ  ಡಾ.ಕರಾಟೆ ಎಪಿ ಶ್ರೀನಾಥ್, ಸಾಲೂರು ಬೃಹನ್ಮಠದ ಕೃಷ್ಣ ಮೂರ್ತಿ ಮಹಾಸ್ವಾಮಿಗಳು, ನಿವೃತ್ತ ಎಸಿಪಿ ಡಾ ಲಯನ್ ಎಸ್ ಬಿ ಛಬ್ಬಿ, ಡಿಸಿಪಿ ಬಿಎಸ್ ಅಂಗಡಿ, ಗಂಗಮ್ಮ ಶಕ್ತಿ ಪೀಠದ ಎಸ್ ರವಿಚಂದ್ರನ್ ಸ್ವಾಮೀಜಿ ಮೊದಲಾದ ಗಣ್ಯರು  ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group