ಸಾಹಿತಿ ಭೇರ್ಯ ರಾಮಕುಮಾರ್ ದೂರಿನ ಪ್ರತಿಫಲ: ಕನ್ನಡ ನಾಮಫಲಕ ಅಳವಡಿಸಿದ ಜೆಕೆ ಟೈಯರ್ಸ್ ಸಂಸ್ಥೆ

Must Read

ಮೈಸೂರಿನ ಹಲವು ಪ್ರದೇಶಗಳಲ್ಲಿ ಬಸ್ ನಿಲುಗಡೆಗಳಲ್ಲಿ  ಜೆಕೆ ಟೈಯರ್ಸ್ ಕಂಪನಿ ವತಿಯಿಂದ ಈ ಹಿಂದೆ ನಾಮಫಲಕಗಳನ್ನು ಅಳವಡಿಸಲಾಗಿತ್ತು. ಸುಮಾರು ಇಪ್ಪತಕ್ಕೂ ಹೆಚ್ಚು ಬಸ್ ನಿಲ್ದಾಣಗಳಲ್ಲಿ ಆಂಗ್ಲ ಭಾಷಾ ನಾಮಫಲಕಗಳನ್ನು ಜೆಕೆ ಟೈರ್ಸ್ ಸಂಸ್ಥೆ ಅಳವಡಿಸಿತ್ತು. ಈ ನಾಮಫಲಕಗಳಲ್ಲಿ ಒಂದು ಕನ್ನಡ ಅಕ್ಷರವೂ ಇರಲಿಲ್ಲ.

ಸಾಹಿತಿ, ಹಿರಿಯ ಪತ್ರಕರ್ತರು ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ. ಭೇರ್ಯ ರಾಮಕುಮಾರ್ ಅವರು ದಿನಾಂಕ 2023 ಮಾರ್ಚ್ 9 ರಂದು ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು.ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸದೆ ಇರುವ ನಾಮಫಲಕಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಅವರು ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಮೈಸೂರು ನಗರಪಾಲಿಕೆ ಆಯುಕ್ತರಿಗೆ ಜೆಕೆ ಟೈರ್ಸ್ ಸಂಸ್ಥೆಯು ಮೈಸೂರು ನಗರದ ವಿವಿಧ  ಬಸನಿಲ್ದಾಣಗಳಲ್ಲಿ ಅಳವಡಿಸಿರುವ  ನಾಮಫಲಕಗಳಲ್ಲಿ ಕನ್ನಡ ಭಾಷೆಯ ಬಗ್ಗೆ  ನಿರ್ಲಕ್ಷ ತೋರಿಸಿದ್ದು, ಸದರಿ ಸಂಸ್ಥೆಗೆ ಸೂಕ್ತ ಆದೇಶ ನೀಡಿ ನಾಮಫಲಕಗಳಲ್ಲಿ ಕನ್ನಡ ಅಳವಡಿಸುವಂತೆ ಶಿಸ್ತಿನ ಆದೇಶ ನೀಡಬೇಕೆಂದು ಕೋರಿದ್ದರು.

ಇದೀಗ ಜೆಕೆ ಟೈರ್ಸ್ ಸಂಸ್ಥೆಯು ಮೈಸೂರು ನಗರದ ವಿವಿಧ ಬಡಾವಣೆ ಗಳಲ್ಲಿ ಇರುವ ಬಸ್ ನಿಲ್ದಾಣಗಳ ನಾಮಫಲಕಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಿದೆ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಅವರ ಕನ್ನಡಪರ ಹೋರಾಟಕ್ಕೆ ದೊರೆತ ಗೆಲುವಾಗಿದೆ. ಕನ್ನಡ ನಾಮಫಲಕ ಅಳವಡಿಸಿದ ಜೆಕೆ ಟೈರ್ಸ್ ಸಂಸ್ಥೆಗೆ ಹಾಗೂ ಅದಕ್ಕೆ ಕಾರಣಕರ್ತರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಹಿತಿ ಡಾ. ಭೇರ್ಯ ರಾಮಕುಮಾರ ಕೃತಜ್ಞತೆ ಸಲ್ಲಿಸಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group