ಜೀವನದಲ್ಲಿ ಶಿಸ್ತು ಕಲಿಸುವ ಸಾರಂಗಮಠ – ನೀಲಮ್ಮ ಹಿರೇಮಠ

Must Read

ಸಿಂದಗಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಎಷ್ಟು ಓದಿದರು ಕಡಿಮೆ ಎನ್ನುವ ಕಾಲದಲ್ಲಿ ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ಮಾಡಿ ಜೀವನದಲ್ಲಿ ಒಂದು ಉತ್ತಮ ಸ್ಥಾನವನ್ನು ಗಳಿಸಿ ಕಾಲೇಜಿನ ಹಾಗೂ ತಂದೆ-ತಾಯಿಗಳ ಋಣ ತಿರಿಸಬೇಕು ಎಂದು ಬೆಂಗಳೂರಿನ ಸದರ್ನ ಇಲೆಕ್ಟ್ರಿಕಲ್ ಕಂಪನಿ ನಿರ್ದೇಶಕಿ ಶ್ರೀಮತಿ ನೀಲಮ್ಮ ಹಿರೇಮಠ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪ.ಪೂ.ಕಾಲೇಜಿನಲ್ಲಿ ಹಮ್ಮಿಕೊಂಡ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಮತ್ತು ಪಠ್ಯಪೂರಕ ಚಟುವಟಿಕೆ, ರೋವರ್ ಮತ್ತು ರೇಂಜರ್, ಭಾರತ ಸೇವಾದಳ, ಮತದಾರರ ಸಾಕ್ಷರತಾ ಸಂಘ, ಎನ್.ಎಸ್.ಎಸ್.ಘಟಕಗಳ ಉದ್ಘಾಟಿಸಿ ಅವರು ಮಾತನಾಡಿದರು. 

ಸಿಂದಗಿ ಸಾರಂಗಮಠವು ಸಂಸ್ಕಾರ ಕಲಿಸುವ ಪದ್ಧತಿ ಹಾಗೂ ಪಾಠಶಾಲಾ ವಿದ್ಯಾರ್ಥಿಗಳನ್ನು ಪೂಜ್ಯರು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವುದರ ಜೊತೆಗೆ ಜೀವನದ ಶಿಸ್ತನ್ನು ಕಲಿಸುತ್ತಿದ್ದರು. ನಾನೂ ಕೂಡಾ ಬಡತನದ ಕುಟುಂಬದಿಂದ ಬಂದು ಶ್ರೀಮಠದ ಆಶ್ರಯ ಪಡೆದು ಇವತ್ತು ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಗಳಿಸಿದ ಹೆಗ್ಗಳಿಕೆ ನನ್ನದಾಗಿದೆ ಎಂದರು. 

ಸಾನ್ನಿಧ್ಯ ವಹಿಸಿದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ಇವತ್ತಿನ ಕಾಲದಲ್ಲಿ ವಿದ್ಯಾರ್ಥಿಗಳು ತಂದೆ-ತಾಯಿಯರನ್ನು ದೇವರಂತೆ ಪೂಜಿಸಬೇಕು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇನ್ನೂ ಹೆಚ್ಚೆಚ್ಚು ಅಂಕಪಡೆಯಬೇಕು ಎಂದು ಸಾಧನೆ ಮಾಡಲು ಪ್ರೋತ್ಸಾಹಿಸಿದರು. 

ಈ ಸಮಾರಂಭದಲ್ಲಿ ಸದರ್ನ ಇಲೆಕ್ಟ್ರಿಕಲ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಡಿವಾಳಯ್ಯ ಹಿರೇಮಠ, ಪವಿವ ಸಂಸ್ಥೆಯ ನಿರ್ದೇಶಕರಾದ ನೆಹರೂಜಿ ಪೋರವಾಲ, ಹ.ಮ.ಪೂಜಾರ, ನಿವೃತ್ತ ದೈಹಿಕ ನಿರ್ದೇಶಕ ಕೆ.ಎಚ್.ಸೋಮಾಪೂರ ಮತ್ತು 2023 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಮಾತನಾಡಿದರು.  ಚರ್ಚಾಕೂಟ ವಿಭಾಗದ ಕಾರ್ಯಾಧ್ಯಕ್ಷ ಪ್ರಸನ್ನ ಜೋಗೂರ ಸ್ವಾಗತಿಸಿದರು. ಮಾರುತಿ ತಳವಾರ ವಂದಿಸಿದರು. 

ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ಬಿ.ಜಿ.ಮಠ, ಬಿ.ಎಂ.ಗೋಟಕಿಂಡಿಮಠ, ಚನ್ನಪ್ಪ ಕಟ್ಟಿ, ಎಂ.ಎಂ.ಪಡಶೆಟ್ಟಿ, ಬಿ.ಎಂ.ಸಿಂಗನಳ್ಳಿ, ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಎಸ್.ಜಿ.ಮಾರ್ಸನಳ್ಳಿ, ಶಿವಶರಣ ಬೂದಿಹಾಳ, ಎಸ್.ಎಚ್.ಜಾಧವ, ರಾಹುಲ ನಾರಾಯಣಕರ್, ಸಂಗಮೇಶ ಚಾವರ, ರೋಹಿತ ಸುಲ್ಪಿ, ಎನ್.ಎಂ.ಶೆಳ್ಳಗಿ, ಸುನೀಲ ಪಾಟೀಲ, ಎಂ.ಐ.ಮುಜಾವರ್, ವ್ಹಿ.ಕೆ.ಹಿರೇಮಠ, ಐ.ಎಸ್.ಶಿವಸಿಂಪಿಗೇರ್, ಎಸ್.ಎಸ್.ತಾಳಿಕೋಟಿ, ಶರಣು ಜೋಗೂರ, ವ್ಹಿ.ಪಿ.ನಂದಿಕೋಲ, ಸುಭಾಸ ಹೊಸಮನಿ, ಆರ್.ಎಂ.ಕೊಳ್ಳೂರೆ, ನೀಲಕಂಠ ಮೇತ್ರಿ, ಅಡಿವೆಪ್ಪ ದಸ್ಮಾ, ಎ.ಬಿ.ಬಮ್ಮಣ್ಣಿ, ಭಾಗಮ್ಮ ಕೋರಿ ಸೇರಿದಂತೆ ವಿದ್ಯಾರ್ಥಿಗಳು ಇನ್ನಿತರರು ಇದ್ದರು.

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group