ಬೀದರ – ಕೇವಲ ತಿಂಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿಗೆ ರೂ.೧.೨೫ ಕೋಟಿ ಪಂಗನಾಮ ಹಾಕಿದ SBI ಎಟಿಎಮ್ ಚನಲ್ ಮ್ಯಾನೇಜರ್
SBIನ ಹುಮನಾಬಾದ್ ಬ್ರ್ಯಾಂಚ್ (20239) ನಲ್ಲಿ ATM ಚಾನಲ್ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣ ಎಂಬಾತ ೪೮ ಬಾರಿ ಖಾತೆದಾರರ ಖಾತೆಗೆ ಹೆಚ್ಚುವರಿ ಹಣ ಹಾಕಿ, ವಿಥ್‌ಡ್ರಾ ಮಾಡಿ ರೂ.೧.೧೦ ಕೋಟಿ ಹಾಗು ಬ್ಯಾಂಕ್‌ನಿಂದ ೧೫ ಲಕ್ಷ ನಗದು ಲೂಟಿ ಮಾಡಿದ್ದಾನೆ
ಹುಮನಾಬಾದ್ ಬ್ರ್ಯಾಂಚ್‌ನ ೧೬ ಎಟಿಎಮ್‌ಗಳ ಇಂಡೆಂಟ್ ಪಡೆದು ಪರಿಶೀಲಿಸಿದಾಗ ಮ್ಯಾನೇಜರ್ ಕೃತ್ಯ ಬಯಲಾಗಿದೆ. ಎಟಿಎಮ್‌ಗೆ ಅವಶ್ಯಕತೆಗಿಂತ ಹೆಚ್ಚುವರಿ ಹಣ ವಿಥ್‌ಡ್ರಾ ಮಾಡಿ ವಿವಿಧ ಖಾತೆದಾರರಿಗೆ ಹಾಕಿದ್ದ ಪ್ರವೀಣ್. ಎಸ್‌ಬಿಐ ಬ್ಯಾಂಕ್‌ಗೆ ಮೋಸ ಮಾಡಿದ ಹಿನ್ನೆಲೆ ಬ್ರ್ಯಾಂಚ್ ಮ್ಯಾನೇಜರ್ ರಘುನಾಥ ಅವರಿಂದ ದೂರು ದಾಖಲಾಗಿದ್ದು ಎಟಿಎಮ್ ಚನಲ್ ಮ್ಯಾನೇಜರ್ ಪ್ರವೀಣ್ ವಿರುದ್ದ ಹುಮನಾಬಾದ್ ಠಾಣೆಯಲ್ಲಿ ಬಿಎನ್‌ಎಸ್ 316, 316(5), 318, 336(3), 340(2) ಖಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ

