ಶಾಲಾ-ಕಾಲೇಜು ಪುನರಾರಂಭ; ಔರಾದನಲ್ಲಿ ವಿದ್ಯಾರ್ಥಿಗಳಿಗೆ ಸಚಿವರಿಂದ ಸ್ವಾಗತ

Must Read

ಬೀದರ – ಕರೋನ ಇದ್ದ ಹಿನ್ನೆಲೆಯಲ್ಲಿ ಎರಡು ವರ್ಷ ಶಾಲೆ ಬಂದು ಇದ್ದು ಇಂದು ಶಾಲಾ ಕಾಲೇಜುಗಳಲ್ಲಿ ಗಂಟೆಯ ಸದ್ದು… ಬರೊಬ್ಬರಿ ಎರಡು ವರ್ಷ ಬಳಿಕ ಸ್ಕೂಲ್ ಕಾಲೇಜು ಓಪನ್.

ಜಿಲ್ಲೆಯ ಔರಾದ ಪಟ್ಟಣದ ಸರಕಾರಿ ಪ್ರೌಢ ಶಾಲೆ ಹಾಗೂ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಸಚಿವ ಪ್ರಭು ಚವ್ಹಾಣ ಸ್ವಾಗತಿಸಿದರು. ಕರೋನ ಎಂಬುದು ಎಚ್ಚರ ಇರಲಿ ಭಯ ಬೇಡ ಶಾಲೆಗಳಿಗೆ ಬರುವಾಗ ಅಂತರ ಕಾಪಾಡಿಕೊಂಡು ಸಾನಿಟೈಜರ ಮಾಸ್ಕ ಹಾಕಿಕೊಂಡು ಬರಬೇಕೆಂದು ವಿದ್ಯಾರ್ಥಿಗಳಿಗೆ ಸಚಿವ ಚವ್ಹಾಣ ಸಲಹೆ ನೀಡಿದರು.

ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಸಂಗೀತಾ ತಂದೆ ಬಸಪ್ಪ ಖಡ್ಕೆ NMMS ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು ಶಾಲೆಗೆ ಹಾಗೂ ತಾಲೂಕಿಗೆ ಉತ್ತಮ ಸಾಧನೆ ಮಾಡಿದ್ದಕ್ಕೆ ಸಚಿವ ಪ್ರಭು ಚವ್ಹಾಣ ಅವರಿಂದ 6 ಸಾವಿರ ರೂಪಾಯಿ ಬಹುಮಾನ ನೀಡಿ ಗೌರವಿಸಿದರು.

ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲಾ-ಕಾಲೇಜು ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಂಡ ಶಾಲಾ ಆಡಳಿತ ಮಂಡಳಿ

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿ ಎಚ್.ಎಸ್ ನಾಗನೂರ, ಆದರ್ಶ ವಿದ್ಯಾಲಯದ ಪ್ರಾಂಶುಪಾಲರಾದ ಧೂಳಪ್ಪಾ ಮಾಳನೂರ,ಸಿ ಆರ್ ಸಿ ಬಾಲಾಜಿ ಅಮರವಾಡಿ ಸರಕಾರಿ ಪ್ರೌಢ ಶಾಲೆ ಪ್ರಾಂಶುಪಾಲ ಮಾಹಾದೇವ ಬಿಜಾಪೂರೆ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group