Homeಸುದ್ದಿಗಳುಅಮರಾಪುರ ಶಾಲಾ ಪ್ರಾರಂಭೋತ್ಸವ

ಅಮರಾಪುರ ಶಾಲಾ ಪ್ರಾರಂಭೋತ್ಸವ

ಬೆಳಗಾವಿ –  ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಅಮರಾಪೂರ ಗ್ರಾಮದಲ್ಲಿ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕ್ಷೇತ್ರಸಮನ್ವಯಾಧಿಕಾರಿಯಾದ ಶ್ರೀಮತಿ ಗಾಯತ್ರಿ ಅಜ್ಜನ್ನವರ, ಬಿಆರ್‌ಪಿ ಶ್ರೀಮತಿ ಜ್ಯೋತಿ ಕೋಟಗಿ ಮತ್ತು ಸಿಆರ್‌ಪಿ ವಿನೋದ ಪಾಟೀಲ ಅವರು ಶಾಲೆಗೆ ಆಗಮಿಸಿದರು.

ಮಕ್ಕಳಿಗೆ ಹೂ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಮಕ್ಕಳಿಗೆ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಸಿಹಿಯೂಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಅಧಿಕಾರಿಗಳು ಶಾಲೆಯ ವಾತಾವರಣವನ್ನು ಪರಿಶೀಲಿಸಿ, ಮಕ್ಕಳೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಎಮ್ ಬಿ ಕಲ್ಲೊಳ್ಳಿ ಶಿಲ್ಪಾ ಕುಬಸದ ಹಾಗೂ ಎಸ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.

RELATED ARTICLES

Most Popular

error: Content is protected !!
Join WhatsApp Group