- Advertisement -
ತಿಮ್ಮಾಪುರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದಿನಾಂಕ 31-5-2024ರಂದು ಮುಂಜಾನೆ10ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ,ಶಾಲಾ ಪ್ರಾರಂಭೋತ್ಸವ ಜರುಗಿತು.
ನಂತರ ಗ್ರಾಮದ ತಾಯಂದಿರು ಶಿಕ್ಷಕರು ನೂತನವಾಗಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ಸಿಹಿ ನೀಡುವ ಮೂಲಕ ಸ್ವಾಗತಿಸಿದರು. ದಾಖಲಾತಿ ಆಂದೋಲನದ, ಪ್ರಭಾತ ಫೇರಿ, ಮೆರವಣಿಗೆ ಯು ಗ್ರಾಮದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುತ್ತ, ಶಾಲಾ ದ್ವಾರದ ಬಾಗಿಲಿಗೆ ಬಂದು ತಲುಪಿತು
ಈ ಸಂದರ್ಭದಲ್ಲಿ ಮುಖ್ಯ ಗುರು ಮಾತೆ ಕಸ್ತೂರಿ ಬೆಲ್ಲದ ಸಹಶಿಕ್ಷಕರಾದ ಮಂಜುನಾಥ್ ಟಕ್ಕಳಿಕಿ, ಬಸವರಾಜ ತೋಟಿಗೇರ, ಗೀತಾ ತಾರಿವಾಳ, ಎಂ ಬಿ ಮನಿಯರ್ ಕೆ ಕೆ ಮಿಂಚಿನಾಳ ಹಾಗೂ ಅಡಿಗೆ ಸಿಬ್ಬಂದಿ ಉಪಸ್ಥಿತರಿದ್ದರು