Homeಸುದ್ದಿಗಳುಓತಿಹಾಳ ಸರಕಾರಿ ಶಾಲೆಯ ಛಾವಣಿ ಶಿಥಿಲ; ಬಯಲಲ್ಲೆ ಪಾಠ ಬೋಧನೆ

ಓತಿಹಾಳ ಸರಕಾರಿ ಶಾಲೆಯ ಛಾವಣಿ ಶಿಥಿಲ; ಬಯಲಲ್ಲೆ ಪಾಠ ಬೋಧನೆ

ಸಿಂದಗಿ; ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗಳು ಬಹಳ ಹಳೆಯದಾಗಿದ್ದು, ಮಳೆ ಬಂದರೆ ಸಾಕು ತರಗತಿಯ ಎಲ್ಲ ಕೋಣೆಗಳು ಸೋರುತ್ತಿರುತ್ತವೆ. ಹಲವಾರು ಬಾರಿ ಬಿಸಿ ಊಟದ ದವಸ-ಧಾನ್ಯಗಳು ಹಾಗೂ ಶಾಲೆಯ ಇನ್ನಿತರ ವಸ್ತುಗಳು ನೀರಲ್ಲಿ ಮುಳುಗಿ ಹೋಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಹತ್ತಾರು ವರ್ಷಗಳಿಂದಲೂ ಶಿಕ್ಷಣ ಇಲಾಖೆಗೆ ಸ್ಥಳೀಯ ಶಾಸಕರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿ ಗಮನಕ್ಕೆ ತಂದರು ಕೂಡಾ ಶಾಲೆಯ ರೀಪೇರಿ, ಕೋಣೆಗಳ ನಿರ್ಮಾಣ ಏನೂ ಆಗಿರುವುದಿಲ್ಲ ಎಂದು ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷೆ ಬಸಮ್ಮ ಪ್ರಭು ಮಣೂರ ದೂರಿದ್ದಾರೆ.

ಶಾಲೆಯ ಛಾವಣಿ ಕೂಡ ಸೋರುತ್ತಿದ್ದು ಮಕ್ಕಳಿಗೆ ಬಯಲಲ್ಲಿಯೆ ಪಾಠ ಮಾಡುವ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದ್ದಾರೆ.

ಈಗಲಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಾಸಕರು ಹಾಗೂ ತಹಶೀಲ್ದಾರ ಸಾಹೇಬರು ತಕ್ಷಣ ಓತಿಹಾಳ ಗ್ರಾಮದ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಗಾಗಿ ಉತ್ತಮ ಕೋಣೆಗಳ ನಿರ್ಮಾಣ ಮಾಡಿಕೊಡಬೇಕು ಬೇಗ ಶಾಲಾ ಮಕ್ಕಳಿಗೆ ಕೋಣೆಗಳ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಶಾಲಾ ಮಕ್ಕಳ ಜೊತೆಗೆ ತಾಲೂಕು ಶಿಕ್ಷಣ ಇಲಾಖೆಯ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷೆ ಬಸಮ್ಮ ಪ್ರಭು ಮಣೂರ ಶಾಲೆಯ ಎಸ್.ಡಿ.ಎಮ್.ಸಿ. ಸದಸ್ಯರ ಪರವಾಗಿ ಆಗ್ರಹಿಸಿದ್ದಾರೆ

 

RELATED ARTICLES

Most Popular

error: Content is protected !!
Join WhatsApp Group