spot_img
spot_img

ಶ್ರೀವಿದ್ಯಾ ಇಂಟರ್‍ನ್ಯಾಶನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸೈನ್ಸ್ ಎರಡನೇ ಘಟಿಕೋತ್ಸವ

Must Read

- Advertisement -

ಬೆಂಗಳೂರಿನ ಜಯನಗರ 8ನೇ ಬ್ಲಾಕ್‍ನ ಜಿ.ವಿ.ಜನ್ಮ ಶತಾಬ್ದಿ ಕಲಾಭವನದಲ್ಲಿ ನೆರವೇರಿದ ಶ್ರೀವಿದ್ಯಾ ಇಂಟರ್‍ನ್ಯಾಶನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸೈನ್ಸ್ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಬೇಲಿ ಮಠ ಮಹಾಸಂಸ್ಥಾನದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳು ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್‌ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಾಡಿನ ಅತ್ಯಂತ ಹಿರಿಯ ವೇದ-ಶಾಸ್ತ್ರ-ಸಂಗೀತ ವಿದ್ವಾಂಸರುಗಳಿಗೆ ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದರು.

ಬೆಂಗಳೂರಿನ ಹಿರಿಯ ವೇದ ವಿದ್ವಾಂಸ ಧಾಳೀ ಲಕ್ಷ್ಮೀನರಸಿಂಹ ಭಟ್ಟರು, ಶಿರಸಿಯ ಜ್ಯೋತಿಷ ವಿದ್ವಾಂಸರಾದ ಹಿತ್ಲಳ್ಳಿ ನಾಗೇಂದ್ರ ಭಟ್, ಕಾಸರಗೋಡಿನ ಸಂಸ್ಕೃತ ವಿದ್ವಾಂಸ ಬಿ. ಮಾಧವ ಉಪಾಧ್ಯಾಯರು, ಆಗಮ ವಿದ್ವಾಂಸ ಸಭೇಶ್ ಗುರುಕ್ಕಳ್, ಸಂಗೀತ ವಿದ್ವಾಂಸರಾದ ಪ್ರೊ. ವಿ. ಅರವಿಂದ ಹೆಬ್ಬಾರ್, ವಿದುಷಿ ಡಿ.ಶಶಿಕಲಾ, ಭರತನಾಟ್ಯ ವಿದುಷಿ ಬಿ.ಕೆ.ವಸಂತ ಲಕ್ಷ್ಮೀ ಇವರುಗಳು ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದರು.

- Advertisement -

ನಾಡಿನ ಹೆಮ್ಮೆಯ ಸಂಗೀತ ವಿದ್ವಾಂಸರಾದ ಮೈಸೂರಿನ ಕರ್ನಾಟಕ ಕಲಾಶ್ರೀ ಡಾ. ಆರ್.ಎಸ್.ನಂದಕುಮಾರ್ ರವರಿಗೆ “ಸಂಗೀತ ಶಾಸ್ತ್ರ ವಾರಿಧಿ” ಎಂಬ ವಿಶೇಷ ಗೌರವ ; ಇದರೊಡನೆ ಸಾಂಸ್ಕøತಿಕ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ವಿದ್ವಾಂಸರುಗಳಿಗೆ ‘ಮಹೋಪಾಧ್ಯಾಯ’ ಎಂಬ ಪದವಿಯನ್ನು. ಹಿರಿಯ ಸಂಗೀತ ಗುರು ಶ್ರೀ ಜಿ.ಶಂಕರಾನಂದ, ವೇದ ವಿದ್ವಾನ್ ಗಣೇಶ ಘನಪಾಠಿ, ವೇದ ಗುರು ಡಾ. ಎಸ್.ಶ್ರೀನಿವಾಸ್, ಆಗಮ ವಿದ್ವಾಂಸ ಗಣಪತಿ ಎಂ. ಶಾಸ್ತ್ರೀ, ಯೋಗ ಗುರು ಶ್ರೀಮತಿ ರತ್ನ ಮೋಹನ್‍ರಾಮ್, ಕೊಲ್ಲಾಪುರರ ಶ್ರೀವಿದ್ಯಾ ಗುರು ಸುಹಾಸ್ ಮಧುಕರ್ ಜೋಷಿ ಮತ್ತು ಯುವ ವೈಣಿಕ ವಿದ್ವಾಂಸರಾದ ಎಂ. ಪ್ರಶಾಂತ್ ಐಯ್ಯಂಗಾರ್ ಇವರುಗಳಿಗೆ ನೀಡಲಾಯಿತು. ಕುಲಪತಿಗಳಾದ ಡಾ. ಜೆ. ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ಆರ್ಷ ವಿದ್ಯೆಗಳಾದ ವೇದ, ಆಗಮ, ಸಂಗೀತ, ನಾಟ್ಯ, ಯೋಗ, ಜ್ಯೋತಿಷಾದಿ ವಿಷಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾದ ಫ್ಲೋರಿಡಾ ರಾಜ್ಯದ ಇಂಡಿಪೆಂಡೆಂಟ್ ಎಡುಕೇಶನ್ ವಿಭಾಗದಡಿಯಲ್ಲಿ ಸ್ಥಾಪಿಸಲ್ಪಟ್ಟು, ವಿಶ್ವದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಭಾರತ ದೇಶದಲ್ಲಿ ಶ್ರೀವಿದ್ಯಾ ವಿಶ್ವಸಂಶೋಧನಾ ಪ್ರತಿಷ್ಠಾನಮ್ (ರಿ.) ಸಂಸ್ಥೆಯು ಇದರ ಶೈಕ್ಷಣಿಕ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಎಂದು ಡಾ.ಎಸ್.ಆರ್.ನರಸಿಂಹಮೂರ್ತಿ, ಕುಲಸಚಿವರು ತಿಳಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group