ಮೂಡಲಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಕೂಡಲ ಸಂಗಮ ಶ್ರೀಗಳ ಕರೆಯ ಮೇರೆಗೆ ಮಾ.4 ರಂದು ರಾಜ್ಯಾದ್ಯಂತ ರಸ್ತೆ ತಡೆದು ನಡೆಸುವ ಪ್ರತಿಭಟನೆಗೆ ಮೂಡಲಗಿ ತಾಲೂಕಿನಾದ್ಯಂತ ವಿವಿಧ ಸಮಾಜ ಬಾಂಧವರು ಜಾತ್ಯತೀತವಾಗಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಸಮಾಜದ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ತಿಳಿಸಿದ್ದಾರೆ.
ಅವರು ಶುಕ್ರವಾರದಂದು ಪಟ್ಟಣದ ಪತ್ರಿಕಾ ರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾ.4 ರಂದು ಮುಂಜಾನೆ 11 ಗಂಟೆಗೆ ಗುರ್ಲಾಪೂರ ಕ್ರಾಸ್‍ದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಲ್ಲಿ ಸರಕಾರದ ವಿಳಂಬ ನೀತಿ ಹಾಗೂ ಸರಿಯಾಗಿ ಸ್ಪಂದನೆ ನೀಡದ ಕಾರಣ ಪಂಚಮಸಾಲಿ ಕೂಡಲಸಂಗಮದ ಪೀಠಾಧಿಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಕರೆಯ ಮೇರೆಗೆ ಗುರ್ಲಾಪೂರ ಕ್ರಾಸ್‍ದಲ್ಲಿ ನಡೆಯುವ ರಸ್ತೆ ತಡೆ ಚಳವಳಿಯಲ್ಲಿ ಮೂಡಲಗಿ ಪಟ್ಟಣ ಹಾಗೂ ತಾಲೂಕಿನ ಪಂಚಮಸಾಲಿಗಳು ಭಾಗವಹಿಸಬೇಕೆಂದರು.
ಬಣಜಿಗ ಸಮಾಜದ ಮುಖಂಡ ಈರಣ್ಣ ಕೊಣ್ಣುರ, ಗಾಣಿಗ ಸಮಾಜ ಮುಖಂಡ ಮಲಪ್ಪ ಮದಗುಣಕಿ, ಉಪ್ಪಾರ ಸಮಾಜದ ಶಿವಬಸು ಹಂದಿಗುಂದ ಅವರು ಪಂಚಮಸಾಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬಹಳ ದಿನಗಳಿಂದ ಹೋರಾಟ ಮಾಡುತ್ತಾ ಬಂದರೂ ಅವರ ಕನಸು ನನಸಾಗದೇ ಉಳಿದಿದ್ದರಿಂದ ಸರಕಾರಕ್ಕೆ ಒತ್ತಡ ಹಾಕಲು ಮಾ.4 ರಂದು ನಡೆಯುವ ರಸ್ತೆ ತಡೆ ಚಳವಳಿಯು ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಡೆಯಲಿದು, ರಸ್ತೆ ತಡೆ ಚಳವಳಿಯಲ್ಲಿ ಎಲ್ಲ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭಲ್ಲಿ ಬಸವರಾಜ ರಂಗಾಪೂರ, ಚನ್ನಪ್ಪ ಅಥಣಿ, ಶಿವು ಸಣ್ಣಕ್ಕಿ, ಅಜ್ಜಪ್ಪ ಬಳಿಗಾರ, ಸದಾಶಿವ ನಿಡಗುಂದಿ, ಬಾಳು ಮುಗಳಖೋಡ ಉಪಸ್ಥಿತರಿದ್ದರು.