ಕಾಕತಿಯಲ್ಲಿ ಸಂಭ್ರಮದ ರಾಣಿ ಚೆನ್ನಮ್ಮ ಜಯಂತಿ-
ಬೆಳಗಾವಿ ತಾಲೂಕಿನ ರಾಣಿ ಚೆನ್ನಮ್ಮಳ ತವರೂರಾದ ಕಾಕತಿಯಲ್ಲಿ ಸಂಭ್ರಮದ 247ನೇ ರಾಣಿ ಚೆನ್ನಮ್ಮನ ಜಯಂತಿಯನ್ನು ದಿ.14 ರಂದು ಅದ್ದೂರಿಯಾಗಿ ಆಚರಿಸಲಾಯಿತು.
ಚೆನ್ನಮಳ ತವರೂರಲ್ಲಿ ರಾಣಿ ಚೆನ್ನಮ್ಮಳ ಅಶ್ವಾರೂಢ ಚೆನ್ನಮ್ಮಳ ಮೂರ್ತಿಗೆ ಪೂಜೆ ನೆರವೇರಿಸಿದ ರಾಣಿ ಚೆನ್ನಮ್ಮ ವಿಜಯೋತ್ಸವ ಸಮಿತಿಯ ಅಧ್ಯಕ್ಷ ಡಾ. ಎಸ್‌ಡಿ ಪಾಟೀಲ ಮಾತನಾಡಿ ಚೆನ್ನಮ್ಮಳ ಧೈರ್ಯ ಸ್ವಾಮಿ ನಿಷ್ಠೆ ಮತ್ತು ದೇಶಪ್ರೇಮ ಈಗಿನ ಯುವ ಜನಾಂಗಕ್ಕೆ ಮಾದರಿ ಹಾಗೂ ಪ್ರೇರಣದಾಯಕವಾಗಿದೆ. ಆಗಿನ ದೇಶಭಕ್ತಿಯನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಸಾಹಿತಿ,ಚಾರಿತ್ರಿಕ ಕಾದಂಬರಿಕಾರ ಯ.ರು ಪಾಟೀಲ ಮಾತನಾಡಿ ಚೆನ್ನಮ್ಮಳ ಇತಿಹಾಸ ಈಗಲೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಾಗಲು ಇಂತಹ ಜಯಂತಿಗಳು ಅತ್ಯವಶ್ಯವಾಗಿವೆ. ನವಂಬರ್ 14 ಅಧಿಕೃತವಾಗಿ ರಾಣಿ ಚೆನ್ನಮ್ಮಳ ಜಯಂತಿ ಯಾಗಿದೆ ಅದನ್ನು ಸರ್ಕಾರ ಮಟ್ಟದಲ್ಲೂ ಸಹ ದೇಶ ವ್ಯಾಪಿ ಆಚರಿಸುವಂತಾಗಬೇಕು ಆಗ ರಾಣಿ ಚೆನ್ನಮ್ಮಳ ಹೋರಾಟಕ್ಕೆ ನೈಜ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವರ್ಷಾ ಮುಚ್ಚಂಡಿಕರ, ಅಶೋಕ ಖೋತ, ಶಶಿಕಾಂತ
ಪಾಟೀಲ, ಆರ್ ಕೆ ಪಾಟೀಲ, ಬಾಬಾಸಾಹೇಬ ದೇಸಾಯಿ, ಶಕುಂತಲಾ ಶೆಟ್ಟಿ ಸೇರಿದಂತೆ ವಿವಿಧ ಮಹಿಳಾ ಮಂಡಲಗಳ ಸದಸ್ಯರು ಕಾಕತಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ತಾಲೂಕ ನಾಡಕಚೇರಿಯ ಸಿಬ್ಬಂದಿಯವರು ಹಾಗೂ ಕಾಕತಿಯ ಸರ್ಕಾರಿ ಕನ್ನಡ, ಉರ್ದು, ಮರಾಠಿ, ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ದ್ಯಾಪಕ ಬಿ ಎನ್ ಮಡಿವಾಳರ ಸ್ವಾಗತಿಸಿದರು. ಶಿವಾನಂದ ತಲ್ಲೂರ ನಿರೂಪಿಸಿದರು ಮಹೇಶ ಅಕ್ಕಿ ವಂದಿಸಿದರು.

