ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಕಲೆಗಳು ನಶಿಸಬಾರದ ಹಾಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತೇಜನ ನೀಡಿ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಯುವ ಪೀಳಿಗೆ ಗ್ರಾಮೀಣ ಭಾಗದ ಕಲೆಗಳನ್ನು ಪರಿಚಯಸುವ ದೃಷ್ಟಿಯಿಂದ ಫೆ.27 ರಂದು ಕಲ್ಲೋಳಿ ಪಟ್ಟಣದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ಜಾಣಪದ ಅಕಾಡೆಮಿ, ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಹಾಗೂ ವೀರಭದ್ರೇಶ್ವರ ಜಾನಪದ ಕಲಾ ಪೋಷಕ ಸಂಘ ಆಶ್ರಯದಲ್ಲಿ ಗ್ರಾಮೀಣ ಜಾನಪದ ಕಲೆಗಳ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ಹಾಗೂ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಶಿ.ಪಾಟೀಲ ಅವರು ತಿಳಿಸಿದರು.
ಅವರು ಶನಿವಾರದಂದು ಪಟ್ಟಣ ಪತ್ರಿಕಾ ಕಛೇರಿಯಲ್ಲಿ ಜರುಗಿದ ಗ್ರಾಮೀಣ ಜಾನಪದ ಕಲೆಗಳ ವಿಚಾರ ಸಂಕಿರಣ ಕುರಿತು ಮಾತನಾಡಿ, ಈಗಾಗಲೇ ಸಂಕಿರಣದ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ ಅವರು ಮಾತನಾಡಿ, ಫೆ. 27 ರಂದು ಮುಂಜಾನೆ 9ಕ್ಕೆ ಕಲ್ಲೋಳಿ ಪಟ್ಟಣ ಪಂಚಾಯತ ಆವರಣ ಜಾನಪದ ವಾಹಿನಿಗೆ ಪ.ಪಂ ಸದಸ್ಯರು ಮತ್ತು ಅಧಿಕಾರಿಗಳು ಚಾಲನೆ ನೀಡುವರು.
ಮೆರವಣಿಗೆಯು ಮಹಿಳಾ ಡೊಳ್ಳು ಕುಣಿತ, ಕರಡಿ ಸಂಬಾಳ, ಭಾವೈಕ್ಯತೆ ಡೊಳ್ಳು ಗೀತೆಗಳು, ಕೈಪಟ್ಟ ವಾದನ, ತಾಶಾ ವಾದನ, ಸೋಬಾನೆ ತಂಡ, ಭಜನಾ ಮೇಳಗಳಿಂದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿನ ಸಭಾ ಪಂಟಪದವರಿಗೆ ಜರುಗುವುದು.
ಸಮಾರಂಭದ ವೇದಿಕೆಯಲ್ಲಿ ಕಲಾವಿದರಿಗೆ, ವೀರಯೋಧರಿಗೆ ಮತ್ತು ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಜರುಗುವುದು.
10 ಗಂಟೆಗೆ ಜರುಗುವ ಸಮಾರಂಭವನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ ಉದ್ಘಾಟಿಸುವರು, ಹಿರಿಯ ಪಾರಿಜಾತ ಕಲಾವಿದ ಭೀಮಪ್ಪ ಸ.ಕಡಾಡಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟಾರ್ ಎನ್.ನಮ್ರತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಳಗಾವಿಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸುವರು. ನಂತರ ಜಾನಪದ ವಿಷಯ ಆಧಾರಿತ ಪ್ರದರ್ಶನ ಕಲೆಗಳು ಜರುಗುವವು. 12-30ಕ್ಕೆ ಜರುಗುವ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಜಾನಪದ ಚಿಂತಕ ಡಾ.ಸಿ.ಕೆ.ನಾವಲಗಿ ವಹಿಸುವರು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಈಶ್ವರಚಂದ್ರ ಬೆಟಗೇರಿ, ಸಾಹಿತಿ ಬಾಲಶೇಖರ ಬಂದಿ, ಎಂ.ಬಿ.ಕೊಪ್ಪದ, ಬಿಸಿ.ಹೆಬ್ಬಾಳ, ಅಶೋಕ ಕಾಂಬಳೆ ಮತ್ತು ಡಾ.ಆನಂದಕುಮಾರ ಜಕ್ಕಣ್ಣವರ ಅವರು ಆಶಯ ನುಡಿಗಳ್ನಾಡುವರು.
ಮಧ್ಯಾಹ್ನ 1-30 ಗಂಟೆಗೆ ಜರುಗುವ ಸಮಾರೋಪದಲ್ಲಿ ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಅವರು ಸಮಾರೋಪದ ನುಡಿಗಳನ್ನಾಡುವರು ಮತ್ತು ಅತಿಥಿಗಳಾಗಿ ಅನೇಕ ಮಹನೀಯರು ಭಾಗವಹಿಸುವರು. ಸಂಕಿರಣದಲ್ಲಿ ಸುಮಾರು 20 ಕಲಾತಂಡದೊಂದಿಗೆ ಸಮಾರು 250ಕ್ಕೂ ಹೆಚ್ಚು ಜಾನಪದ ಕಲಾವಿದರು ಭಾಗವಹಿಸಲ್ಲಿದಾರೆ ಎಂದು ಡಾ. ಸುರೇಶ ಹನಗಂಡಿ ತಿಳಿಸಿದರು.
ಕಿತ್ತೂರ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಗುಳಪ್ಪ ವಿಜಯನಗರ ಮಾತನಾಡಿ, ಅಧುನಿಕ ಭರಾಟೆಯಲ್ಲಿ ನಸಿ ಹೋಗುತಕ್ಕಂತಹ ದಿನಗಳಲ್ಲಿ ಕಲೆಗಳನ್ನು ಉಳಿಸಿ ಬೆಳೆಸಲು ಗ್ರಾಮೀಣ ವಿಚಾರ ಸಂಕಿರಣವನ್ನು ಏರ್ಪಡಿ ಗ್ರಾಮೀಣ ಕಲೆಯನ್ನು ಪರಿಚಯಿಸುವ ಕೆಲಸವನ್ನು ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಶಿ. ಪಾಟೀಲ ಎಲ್ಲ ರೀತಿಯ ಸಹಾಯ ಸಹಕಾರ ನೀಡಿ ಮಾಡುತ್ತಿದ್ದಾರೆ ಎಂದರು.