spot_img
spot_img

ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಆರ ಪಿ ಜುಟ್ಟನವರ ಸೇವಾ ನಿವೃತ್ತಿ

Must Read

spot_img
- Advertisement -

ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಮೇಲಾಧಿಕಾರಿಗಳಾದ ಆರ ಪಿ ಜುಟ್ಟನವರ ಮಾರ್ಚ ೩೦ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

ಇವರು ಹುಟ್ಟೂರು ಸಂಪಗಾಂವಿ. ಅವರ ಸ್ವಂತ ಮತಕ್ಷೇತ್ರದಲ್ಲಿಯೇ ಚ. ಕಿತ್ತೂರ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ನಿವೃತ್ತಿ ಹೊಂದುತ್ತಿರುವದು ವಿಶೇಷವಾಗಿದೆ 

ಅಪಾರ ಶಿಷ್ಯ ಬಳಗ 

ಸೇವಾ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಿನ ಅಧಿಕಾರಿಗಳಾಗಿದ್ದರೂ ಹೃದಯ ಸದಾ ಸ್ನೇಹದ ಮಿಡಿತವನ್ನು ಹೊಂದಿತ್ತು.

- Advertisement -

ಅಪಾರ ಸೇವಾ ಅನುಭವ ಹೊಂದಿದ ಕಾರಣ ಇಲಾಖೆಯ ನಿಯಮಗಳನ್ನು ಅರಿತವರಾದ ಕಾರಣ ಹೆಚ್ಚಿನ ಶಿಕ್ಷಕರಿಗೆ  ಮಾರ್ಗದರ್ಶನ ಮಾಡುತ್ತಿದ್ದರು. ಹತ್ತು ಹಲವು ಯೋಜನೆ ಅನುಷ್ಠಾನ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಚಿಕ್ಕೋಡಿಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿದ್ದ ಸಮಯದಲ್ಲಿ ಹಲವು ಉಪಯುಕ್ತ ತರಬೇತಿ ಗಳನ್ನು  ಶಿಕ್ಷಕರ ವೃತ್ತಿ ಬದುಕಿನ ಯಶಸ್ಸಿಗೆ ಕಾರಣರಾಗಿದ್ದರು. ಅಥಣಿ ಹಾಗೂ ಖಾನಾಪೂರ ತಾಲೂಕಿನ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಶಿಕ್ಷಕ ಪರ ಕೆಲಸಗಳನ್ನು ಮಾಡಿದ್ದಾರೆ.

ಶಿಕ್ಷಕರ ಮಾರ್ಗದರ್ಶಿಯಾಗಿ ವರ್ಗಭೋಧನೆಯಲ್ಲಿ ಬರುವ ಕಠಿಣತೆಗಳು ಸುಲಭವಾಗಬೇಕು ಎಂದು ಹಲವಾರು ಇಲಾಖೆ ಹಾಗೂ ಜನಸೇವಕರನ್ನು ಭೇಟಿ ಮಾಡಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ಸೇವೆ ಒದಗಿಸುವಲ್ಲಿ ಸಫಲರಾಗಿದ್ದರು ಯಾರೇ ಓಳ್ಳೆಯ ಕೆಲಸಮಾಡಿದರೂ ಶ್ಲಾಘನೆ ಮಾಡುತ್ತಿದ್ದರು ಮತ್ತು ಅಷ್ಟೇ ಕಟ್ಟನಿಟ್ಟಿನ ನಿರ್ಣಯ ತೆಗೆದುಕೊಳ್ಳುವಲ್ಲಿ ಹೆಸರುವಾಸಿ  ಇಂತಹ ಅಧಿಕಾರಿಗಳ ಬಿಳ್ಕೊಡುಗೆಯನ್ನು ಕ್ಷೇತ್ರ ಶಿಕ್ಷಣಾಧಕಾರಿಗಳ ಕಾರ್ಯಾಲಯ ಹಾಗೂ ಎಲ್ಲ ಸರಕಾರಿ ನೌಕರ ಸಂಘಟನೆ ಹಾಗೂ ಶಿಕ್ಷಕ ಸಂಘದ ಸಂಯುಕ್ತಾಶ್ರಯದಲ್ಲಿ ರಾಜಗುರು ಗುರುಭವನ ಚ ಕಿತ್ತೂರ ಇಲ್ಲಿ ಶನಿವಾರ ಇಡಲಾಗಿದೆ ತಾಲೂಕಿನ ಎಲ್ಲ ಶಿಕ್ಷಕರನ್ನು ಅಹ್ವಾನಿಸಲಾಗಿದೆ.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group