ಶಹೀದ್ ದಿವಸ್ ಪಂಜಿನ ಮೆರವಣಿಗೆ

Must Read

ಮುನವಳ್ಳಿ – ಬ್ರಿಟಿಷ್ ಶಾಹಿ ವಿರುದ್ಧ ಹೋರಾಡಿ ದೇಶಕ್ಕಾಗಿ ತಮ್ಮ ಜೀವ ತ್ಯಾಗ ಮಾಡಿದ ಭಗತ್ ಸಿಂಗ್ ರಾಜಗುರು ಹಾಗೂ ಸುಖದೇವ ಹುತಾತ್ಮರಾದ ದಿನದಂದು ಪಂಜಿನ ಮೆರವಣಿಗೆ ನೆರವೇರಿಸುತ್ತಿರುವುದು ನಮ್ಮ ಹೆಮ್ಮೆ ಎಂದು ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಲ್ಲೇಶ್ವರ ಸೂಳೇಬಾವಿ.ತಿಳಿಸಿದರು.

ಅವರು ಪಟ್ಟಣದಲ್ಲಿ ಜರುಗಿದ ಭಾರತೀಯ ಜನತಾ ಪಾರ್ಟಿ ಸವದತ್ತಿ ಮಂಡಲ ಯುವ ಮೋರ್ಚಾದವರು ಸಂಘಟಿಸಿದ್ದ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

“ಇನ್ ಕ್ವಿಲಾಬ್ ಜಿಂದಾಬಾದ್ ಭಾರತ ಮಾತಾ ಕೀ ಜೈ” ಎನ್ನುವ ಘೋಷಣೆ ಕೂಗುತ್ತ ಸಾವಿಗೂ ಹೆದರದೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆಯನ್ನು ನಾವು ಮರೆಯುವ ಹಾಗಿಲ್ಲ.ಅವರ ಬದುಕಿನ ಆದರ್ಶ ಹೋರಾಟದ ಬದುಕನ್ನು ಸದಾ ಸ್ಮರಿಸಬೇಕು”ಎಂದು ಯೋಗಪ್ರವೀಣ ಕಾರ್ತಿಕ ಬೆಲ್ಲದ ತಿಳಿಸಿದರು.

ಮುನವಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿದ ಪಂಜಿನ ಮರವಣಿಗೆಯಲ್ಲಿ ಯೋಗಪ್ರವೀಣ ಕಾರ್ತಿಕ ಬೆಲ್ಲದ.ಪುರಸಭೆ ಸದಸ್ಯರಾದ ಶ್ರೀಕಾಂತ ಮಲಗೌಡರ,.ಗುರು ಚಂದರಗಿ, ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಲ್ಲೇಶ್ವರ ಸೂಳೇಬಾವಿ.ಸವದತ್ತಿ ತಾಲೂಕ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವೂ ಮಲಗೌಡರ. ಪ್ರಧಾನ ಕಾರ್ಯದರ್ಶಿ.ಬಸವರಾಜ ಹಣಸಿ.ಸವದತ್ತಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ರಾಜು ಸಾಲಿಮಠ. ಜಿಲ್ಲಾ ಯುವ ಮೋರ್ಚಾದ ಸತೀಶ ಹೂಗಾರ. ಮಹಾಂತೇಶ ಗೋಕಾಕ. ಅಶೋಕ ಗೋಮಾಡಿ.. ಬಾಪು ಕದಂ.ಬಾಬು ಭಜಂತ್ರಿ ಜಿಲ್ಲಾ ಮತ್ತು ತಾಲೂಕು ಹಂತದ ಪದಾಧಿಕಾರಿಗಳು ಮುನವಳ್ಳಿ ಗ್ರಾಮದ ಯುವಮೋರ್ಚಾದ ಯುವಕರು ಹಿರಿಯರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group