ಸವದತ್ತಿ: ಸ್ಥಳೀಯ ಎಸ್.ಜಿ.ಶಿಂತ್ರಿ ಆಂಗ್ಲ ಮಾದ್ಯಮ ಶಾಲೆಯ ಶ್ರೀ ಚಂದ್ರಶೇಖರ ಮಾಮನಿ ಸಭಾಭವನದಲ್ಲಿ ಮಾ. ೨೬ ರಂದು ಮುಂಜಾನೆ ೧೧ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸವದತ್ತಿ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮತ್ತು ೨೦೨೧-೨೬ನೇ ಅವಧಿಯ ಸಾಹಿತ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕಲ್ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಶಾಸಕರಾದ ಆನಂದ ಮಾಮನಿ ಅಧ್ಯಕ್ಷತೆ ವಹಿಸುವರು. ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಜಗದೀಶ ಶಿಂತ್ರಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅದ್ಯಕ್ಷರಾದ ಬಿವಿಬಿ ನರಗುಂದ, ಪುರಸಭೆ ಉಪಾಧ್ಯಕ್ಷರಾದ ದೀಪಕ ಜಾನ್ವೇಕರ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಿ.ಬಿ.ದೊಡಗೌಡರ, ಕಸಾಪ ನೂತನ ಅಧ್ಯಕ್ಷ ಡಾ.ವೈ.ಎಮ್.ಯಾಕೊಳ್ಳಿ ಭಾಗವಹಿಸಲಿದ್ದಾರೆ. ಧಾರವಾಡ ಆಕಾಶವಾಣಿ ನಿರ್ದೇಶಕರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ಬಸು ಬೇವಿನಗಿಡದರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ಕಸಾಪ ಕಾರ್ಯದರ್ಶಿ ವೈ.ಬಿ.ಕಡಕೋಳ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿ:
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸವದತ್ತಿಯ ೨೦೨೧ ರಿಂದ ೨೦೨೬ ರ ಅವಧಿಗೆ ರಚಿಸಲಾದ ನೂತನ ಕಾರ್ಯಕಾರಿ ಸಮಿತಿ ಇಂತಿದೆ. ಅಧ್ಯಕ್ಷರಾಗಿ ಡಾ.ವೈ.ಎಂ.ಯಾಕೊಳ್ಳಿ. ಗೌರವ ಕಾರ್ಯದರ್ಶಿಗಳಾಗಿ ಬಿ.ಎನ್.ಹೊಸೂರ, ವೈ.ಬಿ.ಕಡಕೋಳ,ಗೌರವ ಕೋಶಾಧ್ಯಕ್ಷರಾಗಿ ಜಿ.ವೈ.ಕರಮಲ್ಲಪ್ಪನವರ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ರಮೇಶ ಕಾಳೆ,ಬಿ.ಬಿ.ಜಾಬರ,ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ನಾಗೇಶ ನಾಯಕ,ಮಹಿಳಾ ಪ್ರತಿನಿಧಿಗಳಾಗಿ ಲಕ್ಷ್ಮೀ ಮಹಾದೇವ ಅರಿಬೆಂಚಿ,ವಿಜಯಲಕ್ಷ್ಮೀ ಉಮೇಶ ದೊಡಮನಿ, ಸಂಘ ಸಂಸ್ಥೆಗಳ ಪ್ರತಿನಿಧಿಗಳಾಗಿ ಕೆ.ಪಿ.ಅನಿಗೋಳ,ಶಿಕ್ಷಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಏ.ಎನ್.ಕಂಬೋಗಿ, ನಿಕಟಪೂರ್ವ ಅಧ್ಯಕ್ಷರಾದ ಸಿ.ಬಿ.ದೊಡಗೌಡರ,ವಿಶೇಷ ಚೇತನ ಸದಸ್ಯ ಪ್ರತಿನಿಧಿಗಳಾಗಿ ಡಾ.ಮಹೇಶ ಅಂಗಡಿ, ಇತರೆ ಸದಸ್ಯರಾಗಿ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿ,ಮಾಧ್ಯಮ ಪ್ರತಿನಿಧಿಗಳಾದ ಪುಂಡಲೀಕ ಬಾಳೋಜಿ,ಬಸವರಾಜ ಶಿರಸಂಗಿ,ಉಪನ್ಯಾಸಕರಾದ ರಮೇಶ ಮುರಂಕರ,ಎಸ್.ಎಸ್.ವಾರೆಪ್ಪನವರ, ಕೆ.ಬಿ.ನರಗುಂದ,ಆನಂದ ಏಣಗಿ,ಮೋಹನ ಸರ್ವಿ, ಬಿ.ಬಿ.ಹುಲಿಗೊಪ್ಪ, ಸೋಮು ಹೊಂಗಲ ಆಯ್ಕೆಯಾಗಿರುವರು.