ಸಿಂದಗಿ: ಸಿಂದಗಿಯ ಸಿರಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 43ನೆಯ ಪುಣ್ಯ ಸ್ಮರಣೆ ಹಾಗೂ ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ನಾಲ್ಕನೆಯ ಗುರು ಸ್ಮರಣೆ ನಿಮಿತ್ತ ಹಮ್ಮಿಕೊಂಡ ಶಾಂತವೀರ ಪಟ್ಟಾಧ್ಯಕ್ಷರ ರಜತ ಮೂರ್ತಿಯ ಪಲ್ಲಕ್ಕಿ ಉತ್ಸವವು ಶುಕ್ರವಾರ ಪಟ್ಟಣದ ವಿವಿಧ ಬೀದಿಗಳ ಮುಖಾಂತರ ಸಂಚರಿಸಿ ಶ್ರೀ ಮಠಕ್ಕೆ ತಲುಪಿತು.
ಈ ಬಾರಿ ನೂರಾರು ಮಹಿಳೆಯರು ಪಲ್ಲಕ್ಕಿಯನ್ನು ಹೊತ್ತು ಸಾಗಿ ಬಂದಿದ್ದು ವಿಶೇಷವಾಗಿದೆ. ಪಲ್ಲಕ್ಕಿ ಉತ್ಸವದ ವೇಳೆ ನೂರಾರು ಸುಮಂಗಲಿಯರು ಆರತಿ ಹಿಡಿದು ಸಾಗಿ ಬಂದರು. ಮಾರ್ಗ ಮಧ್ಯದಲ್ಲಿ ಅನೇಕ ಭಕ್ತರು ಶಾಂತವೀರ ಪಟ್ಟಾಧ್ಯಕ್ಷರ ರಜತ ಮೂರ್ತಿಗೆ ಪೂಜೆ ಸಲ್ಲಿಸಿದರು.
ಶುಕ್ರವಾರ ಬೆಳಗ್ಗೆ ಶ್ರೀಮಠದ ಪೀಠಾಧ್ಯಕ್ಷರಾದ ಪೂಜ್ಯಶ್ರೀ ಶಿವಾನಂದ ಶಿವಾಚಾರ್ಯರು, ಸಂಶಿಯ ವಿರಕ್ತ ಮಠದ ಶ್ರೀ ಚನ್ನಬಸವ ದೇವರು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಉತ್ಸವದಲ್ಲಿ ಗದುಗಿನ ಪಾಠಶಾಲೆಯ ನೂರಾರು ವಟುಗಳು ಭಾಗವಹಿಸಿದ್ದರು. ಊರಿನ ಗಣ್ಯರಾದ ಅಶೋಕ ಮನಗೂಳಿ, ಶಿವಪ್ಪಗೌಡ ಬಿರಾದಾರ, ಶಿರೂಗೌಡ ದೇವರಮನಿ, ಡಾ. ಎಂ ಎಂ ಪಟಶೆಟ್ಟಿ, ಸೋಮನಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಮಾದೇವಪ್ಪ ಮುಂಡೆವಾಡಗಿ, ನೀಲಪ್ಪ ಕುಂಬಾರ, ಅಶೋಕ ಕುಲಕರ್ಣಿ, ಸದಾಶಿವ ಕುಂಬಾರ, ಪ್ರಶಾಂತ ಪಟ್ಟಣಶೆಟ್ಟಿ, ಗಂಗಾಧರ ಚಿಕ್ಕಯ್ಯನ ಮಠ, ಗದ್ಗಯ್ಯ ನಂದಿಮಠ, ಉಮೇಶ ಪಟ್ಟಣಶೆಟ್ಟಿ, ಬಸವರಾಜ್ ಕುಂಬಾರ, ಕಲ್ಲಪ್ಪ ತಾರಾಪುರ, ಶಿವಪ್ಪ ಕುಂಬಾರ, ರವಿ ಗವಸಾನಿ, ಸಿದ್ದಲಿಂಗ ಕಿಣಗಿ, ಸತೀಶ ಹಿರೇಮಠ, ಮಲ್ಲು ಲಾಳಸಂಗಿ, ಸಾವಿತ್ರಿ ಪ್ರಭೂಲಿಂಗ ಲೋಣಿ, ಸೇರಿದಂತೆ ಅನೇಕರು ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾಗಿದ್ದರು.