ಶರಣ ಆಯ್ದಕ್ಕಿ ಮಾರಯ್ಯ

Must Read

12ನೇ ಶತಮಾನ ಸುವರ್ಣಕ್ಷರಗಳಿಂದ ಬರೆದಿಡುವ ಕಾಲಘಟ್ಟ. ವಚನ ಸಾಹಿತ್ಯ ಹುಟ್ಟಿದ್ದೇ ಜನಸಾಮಾನ್ಯರಿಗಾಗಿ. ಶರಣರ ಅನುಭವ ಜನ್ಯ ನುಡಿಮುತ್ತುಗಳು ಸನ್ನಡತೆಯ ದೀವಿಗೆಗಾಗಿ ಜನಸಾಮಾನ್ಯರ ಹೃದಯ ಮುಟ್ಟಿದವು, ತಟ್ಟಿದವು. ನಿರಾಭರಣ ಸೌಂದರ್ಯ “ವಚನ ಸಾಹಿತ್ಯ” ಮೇರು ತಾರೆಯಾಗಿ ನಿಂತಿದೆ.ಶರಣರು ಉನ್ನತ ವ್ಯಾಸಂಗ ಮಾಡಿದ್ದರೂ ಅನುಭವದ ಜ್ಞಾನ ಸಾಗರವಾಗಿದ್ದರು.
ಸಮತಾಜೀವಿಯಾದ ಬಸವಣ್ಣ ಕಾಯಕ ಮತ್ತು ದಾಸೋಹಕ್ಕೆ ಪ್ರಾಧ್ಯಾನತೆ ನೀಡಿದ್ದು ವೈಶಿಷ್ಟ್ಯಪೂರ್ಣವಾದುದು.

ಇಂಥ ಕಾಯಕ ಮಹತ್ವಕ್ಕೆ ಭಾಷ್ಯ ಬರೆದಂತಿದ್ದ ಮಾರಯ್ಯ ದಂಪತಿಗಳು ಒಂದು ಅರ್ಥದಲ್ಲಿ ಈ ತತ್ವವನ್ನು ಕೃತಿರೂಪವಾಗಿ ಜಾರಿಗೆ ತಂದಿದ್ದು ಶ್ಲಾಘನೀಯ.
ರಾಯಚೂರ ಜಿಲ್ಲೆ ಲಿಂಗಸುಗೂರ ತಾಲೂಕಿನ ಯರಡೋಣಿ ಗ್ರಾಮ ಮಾರಯ್ಯನ ಜನ್ಮ ಸ್ಥಳ.ಮಾರಯ್ಯ ದಂಪತಿಗಳು ಆ ಊರಿನ ಅಮರೇಶ್ವರ ಲಿಂಗದ ಪರಮ ಭಕ್ತರಾಗಿದ್ದರು. ಅವರದು ಆಯ್ದಕ್ಕಿ ಎನ್ನುವಲ್ಲಿ ಶರಣರ ಅನುಭವದ್ದಂತೆ, ಕುಟ್ಟುವಾಗ, ಬೀಸುವಾಗ,ಧಾನ್ಯ ಅಳೆಯುವಾಗ,ಚೆಲ್ಲಿದ ಕಾಳುಗಳು ಜೀವನಾಧಾರವಾಗಬಲ್ಲವೆಂದು ತಿಳಿದು ಇಂಥ ವಿಶೇಷ ಕಾಯಕ ಆಯ್ದಕೊಂಡರು ಸತ್ಯದ ಹಾಗೂ ಶ್ರಮಜೀವನಕ್ಕೆ ಪ್ರಾಶಸ್ತ್ಯ ನೀಡುವುದೇ ಶರಣರ ಸಂಸ್ಕೃತಿ.

ಲಕ್ಕಣ ದಂಡೇಶ “ಶಿವತತ್ವ ಚಿಂತಾಮಣಿಯಲ್ಲಿ ಆಯ್ದಕ್ಕಿ ಮಾರಯ್ಯನ ಕುರಿತು ಹೇಳಿದ ಬಗೆ ಹೀಗಿದೆ.
ಆಯ್ದಕ್ಕಿ ಮಾರಯ್ಯ ತಂದೆ ಭಕ್ತರ ಮನೆಯೊಳಾಯ್ದು –ತಂದ ಧಾನ್ಯದಿಂದ ಅಂಬಲಿ ಮಾಡಿ ನಲಿಸುತಿಹನು||
ಎನ್ನುವಲ್ಲಿ ಕಾಯಕದ ಕಲಿಯಾದ ಮಾರಯ್ಯನ ನಿಷ್ಟೆ ಆಧ್ಯಾತ್ಯಕ ಸಾಧನೆಯ ಸಿದ್ದಿ ಬೆರಗುಗೊಳಿಸುತ್ತದೆ. ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳು ಕಾಯಕದ ಬಗ್ಗೆ ನಿಲುವೇನು? ಎಂದಾಗ ಮಾರಯ್ಯನ ವಚನ ಕೆಳಗಿನಂತಿದೆ.

ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡು ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು,
ಕಾಯಕವೇ ಕೃಲಾಸ ಕಾರಣ
ಅಮರೇಶ್ವರ ಲಿಂಗ ಲಿಂಗವಾಯಿತ್ತಾದಡೂ ಕಾಯಕದೊಳಗು.

ಅಬ್ಬಾSS ಏನಾಶ್ವರ್ಯ ಈ ಕಾಯಕದ ಮಹಾತಪಸ್ಸಿನ ಅರಿವು. ಸತ್ಯಶುದ್ದ ಕಾಯಕ ಮಾಡುವಾಗ, ಗುರುವಿನ ದರ್ಶನದ ಕಡೆಗೂ ಗಮನಹರಿಸಲಾಗದು. ಲಿಂಗ ಪೂಜೆಯ ಹಂಗು ಮರೆ. ಸಾಕ್ಷತ ಜಂಗಮನೇ ಬಂದರೂ, ಮುಗ್ಧ- ಮಗ್ನ ಮಾಡುವ ಕಾಯಕದಲ್ಲಿರಬೇಕು. ಮೊದಲ ಆದ್ಯತೆ ದುಡಿಮೆ, ಪ್ರಾಮಾಣಿಕ ದುಡಿಮೆ.ಗುರು-ಲಿಂಗ-ಜಂಗಮ ನಂತರ ಎಂಬ ಭಾವ ವ್ಯಕ್ತವಾಗಿದ್ದು, ಕಾಯಕ, ಇವು ಮೂರನ್ನೂ ಮೀರಿದುದು. “ಕಾಯಕವೇ ಕೈಲಾಸ” ಉಕ್ತಿಗೆ ಇನ್ನೊಂದು ಹೆಸರಾಗಿ ಜೀವಿಸಿದ್ದು ಮಾರಯ್ಯ ದಂಪತಿಗಳು. ಕಾಯಕ-ದಾಸೋಹ ಒಂದೇ ನಾಣ್ಯದ ಎರಡು ಮುಖಗಳು. ಪತಿಯ ಓರೆಕೋರೆಯನ್ನು ನಯವಾಗಿ, ತಿದ್ದುವ ಸಾದ್ವಿ ಲಕ್ಕಮ್ಮ.
ವಚನ ಸಾಹಿತ್ಯ ಸಿದ್ದಾಂತಕ್ಕೆ ಸಿದ್ದಾಂತವಾಗಿರುವ ಇದು ಸಾಹಿತ್ಯಕ್ಕೆ ಸಾಹಿತ್ಯವೆನಿಸಿದೆ. ಪವಿತ್ರ ಸಾಹಿತ್ಯವಾಗಿದೆ.

“ತನ್ನ ಬಿಟ್ಟು ದೇವರಿಲ್ಲ ಮಣ್ಣ ಬಿಟ್ಟು ಮಡಕೆ ಇಲ್ಲ” ಈ ಶಣರ ತತ್ವ ನಿತ್ಯ ಸತ್ಯ.

ಶ್ರೀಮತಿ ಬನಶ್ರೀ ಚೆನ್ನಬಸವರಾಜ ಹತ್ತಿ
ಮುಖ್ಯೋಪಾಧ್ಯಾಯರು
ಸರಕಾರಿ ಪ್ರೌಢ ಶಾಲೆ ಟಕ್ಕಳಕಿ

Latest News

ಕವನ : ಸಾವಿರದ ವಿಶ್ವಮಾನ್ಯಳು

ಸಾವಿರದ ವಿಶ್ವಮಾನ್ಯಳು.ಹಸಿರನು ಉಸಿರಾಗಿಸಿಕೊಂಡವಳು ಬಿಸಿಲಿನ ಬೇಗೆ-ಧಗೆ ನಿವಾರಕಳು ಪರಿಸರಪ್ರೇಮಿ ಪ್ರಿಯರ ಪ್ರೇರಕಳು ಕೋಟಿ ಮರನೆಟ್ಟ ಕೋಟ್ಯಧೀಶಳು./1/ಸಕಲ ಜೀವರಾಶಿಯ ಮಾತೆಯಿವಳು ಮಕ್ಕಳಂತೆ ಮರಗಳ ಪೋಷಿಸಿಹಳು ಪಯಣಿಗರ ದಣಿವು ಪರಿಹರಿಸಿದವಳು ನಾಡಿನ ಜೀವಜಾಲಕೆ ತಂಪನೆರೆದಿಹಳು/2/ಮರಗಳು ಮರುಗುತ ರೋಧಿಸುತಲಿಹವು ವ್ರೃಕ್ಷಮಾತೆಯ...

More Articles Like This

error: Content is protected !!
Join WhatsApp Group