spot_img
spot_img

800 ವರ್ಷಗಳ ಹಿಂದೆಯೇ ಶರಣರು ವಚನಗಳ ಮೂಲಕ ಆರೋಗ್ಯದ ಮಹತ್ವ ಸಾರಿದ್ದಾರೆ

Must Read

spot_img
- Advertisement -

ದೈಹಿಕವಾಗಿ, ಮಾನಸಿಕವಾಗಿ,ಭಾವನಾತ್ಮಕವಾಗಿ, ನೈತಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಜಾಗತಿಕವಾಗಿ ನಮ್ಮೆಲ್ಲರ ಆರೋಗ್ಯವನ್ನು ಹೇಗೆ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎನ್ನುವ ತತ್ವವನ್ನು 800 ವರ್ಷಗಳ ಹಿಂದೆಯೇ ನಮ್ಮ ಶರಣರು ತಮ್ಮ ವಚನಗಳ ಮೂಲಕ ನಮಗೆಲ್ಲ ತಿಳಿಸಿಹೇಳಿದ್ದರು ಎಂದು ಡಾ.ಸಂಗಮೇಶ ಕಲಹಾಳ ಹೇಳಿದರು

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಪ್ರೊ. ಶಾರದಮ್ಮ ಪಾಟೀಲ ಬದಾಮಿ ಇವರ ಶ್ರಾವಣ ಮಾಸದ ದತ್ತಿ ಉಪನ್ಯಾಸದ ಐದನೆಯ ದಿನದ ಗೂಗಲ್ ಮೀಟ್ ನಲ್ಲಿ ಅವರು ಮಾತನಾಡಿದರು.

ಇಂದಿನ ವೈದ್ಯರು ಹೇಳುವುದನ್ನು ಆಗಿನ ಕಾಲದಲ್ಲೇ ನಮ್ಮ ಶರಣರು ವಚನಗಳ ಮೂಲಕ ಪರಿಪೂರ್ಣವಾದ ಆರೋಗ್ಯದ ಕಡೆಗೆ ಗಮನಹರಿಸಿ ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕಿವಿಮಾತು ಹೇಳಿದ್ದರು ಎಂದು ಹೇಳಿ, . ನಡೆಶುಚಿ, ನುಡಿ ಶುಚಿ,ತನು ಶುಚಿ, ಮನ ಶುಚಿ, ಭಾವಶುಚಿ ಎನ್ನುವ ಅಕ್ಕಮಹಾದೇವಿ ಅವರ ವಚನವನ್ನು ಉಲ್ಲೇಖಿಸುತ್ತಾ, ಆದಯ್ಯನವರ ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ ಎನ್ನುವ ವಚನ, ಬಸವಣ್ಣನವರು, ಚೆನ್ನಬಸವಣ್ಣನವರು, ಹಾವಿನಾಳ ಕಲ್ಲಯ್ಯ, ಕಡಕೋಳ ಮಡಿವಾಳಪ್ಪ,ವೈದ್ಯ ಸಂಗಣ್ಣ, ಮನಸಂದ ಮಾರಿತಂದೆ, ಬಾಲಸಂಗಯ್ಯ, ಅಲ್ಲಮಪ್ರಭು ದೇವರು, ಮಡಿವಾಳ ಮಾಚಿದೇವರು ಮುಂತಾದ ಶರಣರ ವಚನಗಳಲ್ಲಿ ಇರುವ ಆರೋಗ್ಯದ ತತ್ವದ ಅರ್ಥದೊಂದಿಗೆ ನಮಗೆಲ್ಲ ಸ್ಪಷ್ಟಪಡಿಸಿದರು.

- Advertisement -

ಆರೋಗ್ಯದ ಕಾಳಜಿಯಲ್ಲಿ ನಾಲ್ಕು ವಿಭಾಗಗಳನ್ನು ಮಾಡಿ ಒಂದೊಂದಾಗಿ ನಮಗೆ ತಿಳಿಯಪಡಿಸಿದರು. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಆಧ್ಯಾತ್ಮಿಕ ಆರೋಗ್ಯ ಮತ್ತು ಸಾಮಾಜಿಕ ಆರೋಗ್ಯ. ಸತ್ಯಶುದ್ಧವಾದ ಕಾಯಕ ಮಾಡಿ, ಜಂಗಮ ದಾಸೋಹಮಾಡಿ, ಬಸವಣ್ಣನವರು ಹೇಳಿದ ಹಾಗೆ ನಮ್ಮ ಈ ಪ್ರಸಾದಕಾಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದನ್ನು ಹೇಳುತ್ತಾ ಇಪ್ಪತ್ತನಾಲ್ಕು ತಾಸು ನಮ್ಮ ದಿನಚರ್ಯ ಹೇಗಿರಬೇಕು,ಪ್ರಕೃತಿಗೆ ಅನುಗುಣವಾಗಿ ನಮ್ಮ ಆಹಾರ ಇರಬೇಕು, ವಾತ, ಪಿತ್ತ, ಕಫದ ಲಕ್ಷಣಗಳ ಕಡೆಗೆ ಗಮನ ಕೊಡಬೇಕು, ಋತುಚರ್ಯೆ ಪಾಲಿಸಬೇಕು, ವೇಗಾರೋಧವನ್ನು ನಿಯಂತ್ರಿಸಬಾರದು, ಅದು ನೈಸರ್ಗಿಕವಾದ ಕ್ರಿಯೆ, ತಡೆಹಿಡಿದರೆ ವಿರುದ್ದಗತಿಯಲ್ಲಿ ಸಾಗಿ ದೇಹ ಹೇಗೆ ಬಳಲುತ್ತದೆ ಎನ್ನುವ ಗುಟ್ಟನ್ನು ಹೇಳಿದರು.

ಮಾನಸಿಕ ಆರೋಗ್ಯದಲ್ಲಿ ಬಹು ದೇವೋಪಾಸನೆ ಮತ್ತು ಮೂಢ ನಂಬಿಕೆಗಳನ್ನು ಜಡಸಮೇತ ಕಿತ್ತೊಗೆದು, ಇಷ್ಟಲಿಂಗ ಪೂಜಿಸಿ, ನಿಜಾಚರಣೆಗಳನ್ನು ಅನುಸರಿಸಬೇಕು ಎನ್ನುವದನ್ನು ಗಟ್ಟಿಧ್ವನಿಯಿಂದ ತಿಳಿಯಪಡಿಸಿದರು. ಆಧ್ಯಾತ್ಮಿಕ ಆರೋಗ್ಯದಲ್ಲಿ ಶಿವಯೋಗ ಜ್ಞಾನದ ಬಗೆಗೆ ಹೆಚ್ಚು ಒತ್ತುಕೊಟ್ಟರು. ಅದರಿಂದ ಜ್ಞಾನೇoದ್ರಿಯ ಮತ್ತು ಕರ್ಮೇoದ್ರಿಯಗಳ ಕ್ರಿಯಾಶಕ್ತಿ ಹೆಚ್ಚುತ್ತದೆ, ಎಂದು ಹೇಳುತ್ತಾ ಸಿದ್ದರಾಮೇಶ್ವರರ ವಚನವನ್ನು ನೆನಪಿಸುತ್ತ ಯೋಗದಲ್ಲಿನ ಚಕ್ರಗಳ ಮಹತ್ವವನ್ನು ಸಹ ತಿಳಿಯಪಡಿಸಿದರು. ಇದರಿಂದ ಆತ್ಮಬಲ, ಆತ್ಮವಿಶ್ವಾಸ, ನಂಬಿಕೆ, ಗ್ರಹಿಕೆ, ನಡವಳಿಕೆ, ಮನವರಿಕೆ ಹೇಗೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ ಎನ್ನುವ ಪರಿಕಲ್ಪನೆ ಮಾಡಿಕೊಟ್ಟರು.

ಕಡೆಯದಾಗಿ ಸಾಮಾಜಿಕ ಆರೋಗ್ಯದಲ್ಲಿ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಕರ್ತವ್ಯಗಳನ್ನು ನೆನಪು ಮಾಡಿಕೊಂಡರು. ಸ್ವಾತಂತ್ರದ ಸದ್ಭಳಕೆ, ಐಕ್ಯತೆ ಮತ್ತು ಅಖಂಡತೆ, ಸ್ತ್ರೀಯರಿಗೆ ಗೌರವ, ನಿಸರ್ಗದ ಸಂರಕ್ಷಣೆ, ದೇಶಾಭಿಮಾನ, ಅಭಿವೃದ್ಧಿ ಪಥದತ್ತ ಕೆಲಸಗಳನ್ನು ಹೇಳುತ್ತಾ ಪ್ರತಿದಿನ ನೆನಪಿಡುವ ಸೂತ್ರಗಳನ್ನು ಸರ್ವಜ್ಞನ ವಚನಗಳ ಉದಾಹರಣೆಯೊಂದಿಗೆ ಹೇಳುತ್ತಾ ತಮ್ಮ ಅಮೂಲ್ಯವಾದ ಮಾತುಗಳನ್ನು ನಮಗೆಲ್ಲ ಕಟ್ಟಿಕೊಟ್ಟು ನಮ್ಮನ್ನೆಲ್ಲ ಸಾರ್ಥಕತೆಯ ದಾರಿಗೆ ಕೊಂಡೊಯ್ದರು.

- Advertisement -

ನಂತರ ಶರಣೆ ಗೌರಮ್ಮ ನಾಶಿ ಅವರು ತಮ್ಮ ಗಂಭೀರವಾದ ಮತ್ತು ಅರ್ಥಪೂರ್ಣವಾದ ನುಡಿಗಳಿಂದ ಮಾರ್ಗದರ್ಶನವನ್ನು ಮಾಡಿದರು. ಡಾ. ಶಶಿಕಾಂತಪಟ್ಟಣ ಅವರು ಅಂದಿನ ಉಪನ್ಯಾಸದ ಕುರಿತು ಮಾತನಾಡಿ , ಲಿಂ. ನಿಜಲಿಂಗಪ್ಪನವರ ಇಪ್ಪತ್ತನಾಲ್ಕನೆಯ ಪುಣ್ಯತಿಥಿ ಎಂದು ನೆನಪಿಸುತ್ತಾ ಅವರು ವಿದ್ವಾoಸರು, ಜ್ಞಾನಿಗಳು, ವಾಗ್ಮಿಗಳು ಆಗಿದ್ದರು ಎಂದು ಅಭಿಮಾನದಿಂದ ಸ್ಮರಿಸಿದರು.
ಸಂವಾದದಲ್ಲಿ ಬಹಳಷ್ಟು ಶರಣ-ಶರಣೆಯರು ಪಾಲ್ಗೊಂಡು ಉಪನ್ಯಾಸದ ಬಗೆಗೆ ಹರುಷ ವ್ಯಕ್ತಪಡಿಸಿದರು

ಶರಣೆ ಶಾರದಮ್ಮ ಅವರ ವಚನ ಪ್ರಾರ್ಥನೆ, ಶರಣೆ ರೇಣುಕಾ ನಾಗರಾಜ ಅವರ ಸ್ವಾಗತ, ಪ್ರಾಸ್ತಾವಿಕ ಮತ್ತು ಪರಿಚಯದ ನುಡಿಗಳು, ಶರಣೆ ಅಕ್ಕಮಹಾದೇವಿ ತೆಗ್ಗಿ ಅವರ ಶರಣು ಸಮರ್ಪಣೆ, ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳ ಮತ್ತು ಡಾ.ಸಾವಿತ್ರಿ ಕಮಲಾಪುರ ಅವರ ಕಾರ್ಯಕ್ರಮ ನಿರ್ವಹಣೆ ಯಿಂದ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಸುಧಾ ಪಾಟೀಲ
ವಿಶ್ವಸ್ಥರು                                                                ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group