Homeಸುದ್ದಿಗಳುಸಿಂದಗಿ - ತಾಲೂಕಾ ದಲಿತ ಸೇನೆಗೆ ಶರಣು ಹೊಸಮನಿ ನೇಮಕ

ಸಿಂದಗಿ – ತಾಲೂಕಾ ದಲಿತ ಸೇನೆಗೆ ಶರಣು ಹೊಸಮನಿ ನೇಮಕ

ಸಿಂದಗಿ; ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಉಪಾದ್ಯಕ್ಷ ಎಂ.ಎ.ಸಿಂದಗಿಕರ, ಜಿಲ್ಲಾದ್ಯಕ್ಷ ಖಾಜು ಹೊಸಮನಿ ಅವರ ಆದೇಶದನ್ವಯ ಸಿಂದಗಿ ತಾಲೂಕಿನ ಮಾಡಬಾಳ ಗ್ರಾಮದ ಜಾನಪದ, ಭಕ್ತಿಗೀತೆ, ವ್ಯಕ್ತಿಗೀತೆಗಳ ನೂರಾರು ಗೀತೆಗಳ ಸಾಹಿತ್ಯವನ್ನ ರಚಿಸಿ ಹಲವಾರು ಹಾಡುಗಳನ್ನ ಸ್ವತಃ ಹಾಡಿದ ಕಲಾವಿದ ಶರಣು ಹೊಸಮನಿ ಇವರನ್ನು ತಾಲೂಕಾ ದಲಿತಸೇನೆಯ ಪ್ರಧಾನ ಕಾರ್ಯದರ್ಶಿಯಾಗಿ ಸರ್ವ ಸದಸ್ಯರ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕಾಧ್ಯಕ್ಷ ಮಹೇಶ ಜಾಬನವರ ತಿಳಿಸಿ ನಂತರ ಅವರನ್ನು ತಾಲೂಕಾ ದಲಿತ ಸೇನೆ ವತಿಯಿಂದ ಸನ್ಮಾನಿಸಲಾಯಿತು,

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ಶರಣು, ವೃತ್ತಿಯಲ್ಲಿ ಸರ್ವಪ್ರಯಾಣಿಕರನ್ನ ಹೊತ್ತೋಯ್ಯುವ ಟಂ ಟಂ ನಡೆಸುತ್ತಿರುವ ನನಗೆ, ಸಾಹಿತ್ಯದಲ್ಲಾಗಲಿ, ಸಂಘಟನೆಯಲ್ಲಾಗಲಿ ಸರ್ವರೊಂದಿಗೆ ವಿಶ್ವಾಸದಿಂದ, ನ್ಯಾಯಯುತವಾಗಿ ಕೆಲಸ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್ಯಕರ್ತರು, ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳು, ಅಭಿಮಾನಿಗಳು ಬಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group