ಬೀದರ – ಕರೋನ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಮರೆಯಾಗಿದ್ದ ಭಕ್ತರ ಸಂಭ್ರಮ ಇಂದು ಶಿವರಾತ್ರಿಯ ಸಂದರ್ಭದಲ್ಲಿ ಪಾಪನಾಶ ದೇವಸ್ಥಾನದಲ್ಲಿ ಕಂಡುಬಂದಿತು.
ರಾಮ ಲಕ್ಷ್ಮಣರು ವನವಾಸ ಸಂದರ್ಭದಲ್ಲಿ ಬೀದರ್ ನ ಪಾಪನಾಶ ದೇವಸ್ಥಾನಕ್ಕೆ ಭೇಟಿ ನೀಡಿರುವರೆಂಬ ಐತಿಹ್ಯ ಇರುವ ಈ ದೇವಸ್ಥಾನದ ಖ್ಯಾತಿ ಸುತ್ತೆಲ್ಲ ಹರಡಿದ್ದು ಶಿವರಾತ್ರಿಯ ಹಿನ್ನೆಲೆಯಲ್ಲಿ ದೂರದೂರದಿಂದ ಭಕ್ತರು ಬಂದು ಪಾಪನಾಶಕ ಶಿವಲಿಂಗದ ದರ್ಶನ ಪಡೆದು ಪುನೀತರಾದರು.
ಬೀದರ್ ಶಿವ ನಗರದಲ್ಲಿ ಇರುವ ಪಾಪನಾಶ ದೇವಸ್ಥಾನದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶಂಪೂರ್ ಕೂಡ ಆಗಮಿಸಿ ಪಾಪನಾಶನಿಗೆ ಪೂಜೆ ಸಲ್ಲಿಸಿ, ದೇಶಾದ್ಯಂತ ಜನರಿಗೆ ಶಿವರಾತ್ರಿ ಹಬ್ಬದ ಶುಭಾಶಯಗಳು ಹೇಳಿದರು.
ಬೀದರ್ ಜಿಲ್ಲೆಯ ಸುತ್ತ ಮುತ್ತ ಸಾವಿರಾರು ಜನರು ಪಾಸನಾಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿಯ ವಿಶೇಷ ದರ್ಶನಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಪಾಪನಾಶ ದೇವಸ್ಥಾನಕ್ಕೆ ಆಗಮಿಸಿ ಶಿವಲಿಂಗ ದರ್ಶನ ಪಡೆಯುತ್ತಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ