- Advertisement -
ಒಂದಿಷ್ಟು ಹನಿಗಳು.
೧. ಇತಿಹಾಸದಲ್ಲಿ ತಲೆ
ಸವರಿದ ಆ ಖಡ್ಗಕ್ಕೆ
ಹರಾಜಿನಲ್ಲಿ ಬಾರಿ ಬೆಲೆ..!
೨. ಮಠದೊಳಗೆ
ಕಟ್ಟುಮಸ್ತಾಗಿದ್ದ ಅಸಾಮಿ
ಟಿವಿಯಲ್ಲಿ ಬೆತ್ತಲಾದನು
- Advertisement -
೩. ಡೊನೇಷನ್ ಶಾಲೆಗೆ
ಅಕ್ಕ ಶಾರದೆ ಇಟ್ಟ
ಹೆಸರು ಸುಲಿಗೆ..!
೪. ಜೀವಕ್ಕೆ ಬೆಲೆ ಕಟ್ಟುವ ವೈದ್ಯರು
ಪ್ರಸಿದ್ಧರು ಒಪ್ಪಬಹುದು
ಆದರೆ ವ್ಯಾಪಾರಿ
ಮನೋಧರ್ಮ..!
೫. ಕಲ್ಲನ್ನು ಶಿಲ್ಪಿ
- Advertisement -
ಕೆತ್ತಿದರೆ ಕಲೆ
ಕಲ್ಲಿನಿಂದ ಶಿಲ್ಪಿ
ಕೆತ್ತಿದರೆ ಕೊಲೆ ..!
೬. ದೋಣಿ ಮೇಲೆ ನೀರಿನಲ್ಲಿ
ವಿಹರಿಸಿದರೆ ವಿಹಾರ
ದೋಣಿ ಒಳಗೆ ನೀರು
ಹರಿದರೆ ಯಾವ ಪರಿಹಾರ..?
–ಗೊರೂರು ಅನಂತರಾಜು, ಹಾಸನ.
ಮೊಬೈಲ್: ೯೪೪೯೪೬೨೮೭೯.