ಪ್ರೌಢ ಶಾಲೆಗೆ ಶಿಕ್ಷಕರ ಕೊರತೆ; ಗ್ರಾಪಂ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

Must Read

ಬೀದರ – ಶಾಲೆಯ 200 ಕ್ಕೂ ಹೆಚ್ಚು ಮಕ್ಕಳಿಗೆ ಒಬ್ಬನೇ ಶಿಕ್ಷಕನಿದ್ದು ಇದರಿಂದ ವಿದ್ಯಾರ್ಥಿಗಳು‌ ಪರದಾಡುವಂತಾಗಿದೆ ಆದಕಾರಣ ಒಂದು ವಿಷಯಕ್ಕೆ ಒಬ್ಬರನ್ನಾದರು ಶಿಕ್ಷಕರನ್ನು ನೇಮಿಸುವಂತೆ ಔರಾದ್ ತಾಲೂಕಿನ ಜಂಬಗಿ ಗ್ರಾಮದ ಪ್ರೌಢ ಶಾಲಾ ಮಕ್ಕಳಿಂದ ಪ್ರತಿಭಟನೆ ನಡೆಯಿತು.

ಶಾಲೆಯಲ್ಲಿ ಗಣಿತ ಬೋಧಿಸುವ ಒಬ್ಬರೇ ಶಿಕ್ಷಕರಿಂದ ಎಲ್ಲರಿಗೂ ಪಾಠ ಹೇಳುವಂತಾಗಿದ್ದು ಹೀಗೆ ಆದರೆ ನಮ್ಮ ಮುಂದಿನ ಭವಿಷ್ಯದ ಗತಿಯೇನು..? ಎಂದು  ವಿದ್ಯಾರ್ಥಿಗಳ ಪ್ರಶ್ನೆ.

ಶಾಲಾ‌ ಮಕ್ಕಳ ಸಮಸ್ಯೆಯನ್ನ‌ ಕೇಳುವವರು ಯಾರು ಇಲ್ಲವೇ..?

ನಾವೇನು‌ ರಾಮಾನುಜಾಚಾರ್ಯರಲ್ಲ, ಒಂದೇ ವಿಷಯದಲ್ಲಿ ಪಂಡಿತರಾಗಿ‌ ಸಾಧನೆ ಮಾಡಲಿಕ್ಕೆ. ನಮಗೆ ಎಲ್ಲ ವಿಷಯದ ‌ಶಿಕ್ಷಕರನ್ನ ನೀಡಿ, ಶಿಕ್ಷಣದ ಪ್ರಮುಖ ಘಟ್ಟ 10 ನೇ ತರಗತಿ. ಎಸ್‌ಎಸ್‌ಎಲ್‌ಸಿಯಲ್ಲೇ ನಮಗೆ ಉತ್ತಮ ಶಿಕ್ಷಣ ಸಿಗಲಿಲ್ಲ ಎಂದರೆ ನಮ್ಮ ಗತಿಯೇನು..? ಶಾಲೆಯ ಸಮಸ್ಯೆಯ ಬಗ್ಗೆ ಗ್ರಾಮಸ್ಥರು, ಪಂಚಾಯತ ಸಿಬ್ಬಂದಿ ಕೇಳಬೇಕು, ಆದರೆ ಅದರ ಬಗ್ಗೆ ಯಾರೂ ಗಮನ ಹರಿಸಿಲ್ಲ  ಎಂದು ಗ್ರಾಮಸ್ಥರು ಹಾಗೂ ಪಂಚಾಯತ ಸಿಬ್ಬಂದಿ ವಿರುದ್ದ ವಿದ್ಯಾರ್ಥಿಗಳು  ಬೇಸರ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group