spot_img
spot_img

ಭಾರತೀಯರ ಕಾರ್ಗಿಲ್ ಹೋರಾಟ ಅವಿಸ್ಮರಣೀಯ – ಪ್ರೊ.ನದಾಫ

Must Read

spot_img
- Advertisement -

ಸಿಂದಗಿ– ಕಾರ್ಗಿಲ್ ಹೋರಾಟವನ್ನು ಭಾರತೀಯರಾದ ನಾವು ಎಂದು ಮರೆಯುವಂತಿಲ್ಲ. ಅದೊಂದು ಅವಿಸ್ಮರಣೀಯ ದಿನವಾಗಿದೆ ಎಂದು ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ಆರ್.ಎಂ ನದಾಫ್ ಹೇಳಿದರು.

ಅವರು ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಜೆ.ಎಚ್. ಪಟೇಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ  ಕಾರ್ಗಿಲ್ ವಿಜಯದ ದಿವಸದ ಉಪನ್ಯಾಸ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.

ಇಂದು ಭಾರತೀಯರಾಗಿರುವ ನಾವೆಲ್ಲರೂ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದು ನಮ್ಮ ಭಾರತೀಯ ಹೆಮ್ಮೆಯ  ಸೈನಿಕರಿಂದ. ಕಾರ್ಗಿಲ್ ಹೋರಾಟ ಇತಿಹಾಸವನ್ನ ಸೃಷ್ಟಿ ಮಾಡಿದ ಹೋರಾಟವಾಗಿದೆ. ಆ ಹೋರಾಟದಲ್ಲಿ ಅನೇಕ ಜನ ಸೈನಿಕರು ಹುತಾತ್ಮರಾಗಿದ್ದಾರೆ ಅವರಿಗೆಲ್ಲಾ ನಮ್ಮ ದೊಡ್ಡ ಸಲಾಂ. ಗಡಿ ಭಾಗದಲ್ಲಿ ಬದುಕುವುದು ಅತ್ಯಂತ ಕಷ್ಟಕರವಾಗಿರುವ ಬದುಕು ಅಂತಹ ವಾತಾವರಣದಲ್ಲಿ ನಮ್ಮ ದೇಶದ ಸೈನಿಕರು ಹೋರಾಟ ಮಾಡಿ ನಮ್ಮ ಪ್ರದೇಶವನ್ನ ಉಳಿಸಿಕೊಂಡಿದ್ದಾರೆಂದರೆ ಇದು ನಿಜಕ್ಕೂ ಶ್ಲಾಘನೀಯ. ಇಂದಿನ ಮಕ್ಕಳಲ್ಲಿ ದೇಶಾಭಿಮಾನ, ದೇಶದ ಸಂಸ್ಕೃತಿ, ದೇಶದ ಹಿರಿಮೆ ಬೆಳೆಸಬೇಕಾಗಿದ್ದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸಬೇಕು. ಶಿಕ್ಷಕರಾದವರು ನಿರಂತರ ಅಧ್ಯಯನಶೀಲರಾಗಬೇಕು ಎಂದರು.

- Advertisement -

ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಕಲ್ಲಪ್ಪ ಹೂಗಾರ ಮತ್ತು ನಜೀರ್ ಪಟೇಲ್ ಬಿರಾದಾರ ಅವರನ್ನು ಮಹಾವಿದ್ಯಾಲಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ  ಡಾ. ಬಿ. ಎಂ. ಹುರಕಡ್ಲಿ ಮಾತನಾಡಿ, ನಮ್ಮ ದೇಶಕ್ಕೆ ಇರುವ ಕಣ್ಣುಗಳು ಎರಡು ಒಂದು ರೈತರು ಹಾಗೂ ಸೈನಿಕರು ಇವರಿಬ್ಬರೂ ಇಲ್ಲದಿದ್ದಲ್ಲಿ ಮಾನವನ ಬದುಕು ಡೊಲಾಯಮಾನವಾಗುತ್ತಿತ್ತು. ಸೈನಿಕರ ಆತ್ಮಸ್ಥೈರ್ಯ, ಧೈರ್ಯ, ಸಾಹಸದ ಪ್ರವೃತ್ತಿಗಳನ್ನು ನಾವೆಲ್ಲ ಅರಿತುಕೊಳ್ಳಬೇಕು. ಇಡೀ ತಮ್ಮ ಬದುಕನ್ನು ತ್ಯಾಗ ಮಾಡಿ ದೇಶಕ್ಕಾಗಿ ಹೋರಾಡಿ ಭಾರತವನ್ನು ಸುರಕ್ಷಿತ ದೇಶವನ್ನಾಗಿ ಮಾಡುವಲ್ಲಿ ಅವರ ಕಾರ್ಯ ಮೆಚ್ಚಲೇಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೈನಿಕರ ಬದುಕಿಗೆ ದೊಡ್ಡ ಶಕ್ತಿಯಾಗಿ ನಿಲ್ಲಬೇಕಾಗಿದೆ. ವಿವಿಧ ಆರ್ಥಿಕ ಯೋಜನೆಗಳನ್ನು ಹಾಗೂ ಅವರ ನಿವೃತ್ತಿಯ ನಂತರದ ಬದುಕಿಗೆ ನಿರಂತರ ಸಹಾಯ ಹಸ್ತ ನೀಡುವಂತಾಗಬೇಕು ಎಂದರು.

ವೇದಿಕೆಯ ಮೇಲೆ ಸಾಂಸ್ಕೃತಿಕ ಚಟುವಟಿಕೆಗಳ  ಕಾರ್ಯಾಧ್ಯಕ್ಷ ಎಸ್.ಆರ್. ಬಿರಾದಾರ ಇದ್ದರು.

- Advertisement -

ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿ ಶ್ರೀಶೈಲ ಜಮಾದಾರ ಹಾಗೂ ಐಶ್ವರ್ಯ ಗೊಬ್ಬೂರ ಪ್ರಾರ್ಥಿಸಿದರು.

ಪ್ರಶಿಕ್ಷಣಾರ್ಥಿ ಮಂಜುನಾಥ್ ಅಂಕಲಗಿ ಹಾಗೂ ಮಹದೇವಿ ರಾಠೋಡ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಭರತ ಮಠ ಸ್ವಾಗತಿಸಿದರು, ಪ್ರಶಿಕ್ಷಣಾರ್ಥಿ ಶಂಕರಗೌಡ ಯಾಳವಾರ ವಂದಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರು ಮತ್ತು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group