ನಗರ ಪ್ರದಕ್ಷಿಣೆಯೊಂದಿಗೆ ಶ್ರೀ ಪಾಂಡುರಂಗ – ರುಕ್ಮಿಣಿ ಉತ್ಸವ ಮುಕ್ತಾಯ

0
454

ಮೂಡಲಗಿ: ಪಟ್ಟಣದ ಗಾಂಧಿ ಚೌಕ ಹತ್ತಿರದ ಶ್ರೀ ವಿಠ್ಠಲ ದೇವಸ್ಥಾನದಲ್ಲಿ, ಶ್ರೀ ಪಾಂಡುರಂಗ ರುಕ್ಮಿಣಿ  ಉತ್ಸವವು 1933 ರಲ್ಲಿ ಪ್ರಪ್ರಥಮ ಉತ್ಸವವಾಗಿ ಹೊರಹೊಮ್ಮಿ ಸತತವಾಗಿ ಇಲ್ಲಿಯವರೆಗೆ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದು ಈ ವರ್ಷ 90 ನೇ ಉತ್ಸವವನ್ನು ಶ್ರಾವಣ ಶುದ್ಧ ದಶಮಿ ಶನಿವಾರ ದಿ. 26-8-2023 ರಿಂದ 29-8-2023 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಶ್ರಾವಣ ಶುದ್ಧ ದಶಮಿ ಶನಿವಾರ ದಿ.26 ರಂದು ಸಂಜೆ 6 ಗಂಟೆಗೆ ಶ್ರೀ ಸಂತ ಮಹಾತ್ಮರ ಅಮೃತ ಹಸ್ತದಿಂದ ದೇವರ ಅಭಿಷೇಕ ಪೂಜಾ ಕಾರ್ಯಕ್ರಮಗಳೊಂದಿಗೆ ಪೋತಿ ಸ್ಥಾಪನೆ ಮಾಡಿ, ನಂತರ ರಾತ್ರಿ 9 ಗಂಟೆಗೆ ಕೀರ್ತನೆ ಮುಗಿದ ನಂತರ ಭಜನಾ ಕಾರ್ಯಕ್ರಮ ಜರುಗಿದವು. 

ರವಿವಾರ ಏಕಾದಶಿ ದಿ.27ರಂದು ಬೆಳಗಿನ 5 ಗಂಟೆಗೆ ಕಾಕಡಾರತಿ, ಭೂಪಾಳಿ ಭಜನೆ, ದೇವರ ಅಭಿಷೇಕ, ಆರತಿಯೊಂದಿಗೆ ಕಾರ್ಯಕ್ರಮ ಮಂಗಲಗೊಂಡು, ಮುಂಜಾನೆ 9 ಗಂಟೆಗೆ ಹರಿಪಾಠ ಭಜನೆ ನಡೆದು,  ಸಂಜೆ 4 ಗಂಟೆಗೆ ಸಂಘ ಸಂತ ಮಹಾತ್ಮರಿಂದ ಪ್ರವಚನ ಹಾಗೂ ಭಜನಾ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಸಂತರಿಂದ ಕೀರ್ತನೆ ಮುಗಿದ ನಂತರ ಅಖಂಡ ಏಕಾದಶಿ ಜಾಗರಣೆ ಜರುಗಿತು.

ಸೋಮವಾರ ದ್ವಾದಶಿ ದಿ.28ರಂದು ಬೆಳಗಿನ 5 ಗಂಟೆಗೆ ಕಾಕಡಾರತಿ, ಭೂಪಾಳಿ ಭಜನೆ, ದೇವರ ಅಭಿಷೇಕ, ಆರತಿಯೊಂದಿಗೆ ಕಾರ್ಯಕ್ರಮ ಮಂಗಲಗೊಂಡು, ಮುಂಜಾನೆ 9 ಗಂಟೆಗೆ ಹರಿಪಾಠ ಭಜನೆ, ದೇವರ ಅಭಿಷೇಕ, ಮಂಗಳಾರತಿಯೊಂದಿಗೆ ಕಾರ್ಯಕ್ರಮ ನಡೆದು, ಸಂಜೆ 5 ಗಂಟೆಗೆ ಕಾಲಾ ಕೀರ್ತನೆ ಮತ್ತು ರಾತ್ರಿ 8 ಗಂಟೆಗೆ ಕಾಲಾ ಮಹಾಪ್ರಸಾದ ನೆರವೇರಿತು.

ಮಂಗಳವಾರ ತೃಯೋದಶಿ ದಿ.29 ರಂದು ಬೆಳಿಗ್ಗೆ 8 ಗಂಟೆಗೆ ದಿಂಡಿ ಸಮಾರಂಭ, ನಗರ ಪ್ರದಕ್ಷಣೆಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಂಡು ಮಧ್ಯಾಹ್ನ 12 ಗಂಟೆಗೆ ಬಂದ ಸದ್ಭಕ್ತರಿಗೆ ಸಂತ ಮಂಡಳಿಗೆ ಮಹಾಪ್ರಸಾದ ನಂತರ ಸಂತರ ಬಿಳ್ಕೊಡುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಲಾಗುತ್ತದೆ. 

ಸದರಿ ಕಾರ್ಯಕ್ರಮಕ್ಕೆ ಎಲ್ಲ ಸದ್ಭಕ್ತ ಸಂತ ಮಂಡಳಿಯವರು ತಮ್ಮ ಬಾಳಗೋಪಾಳ, ತಾಳ ಮೃದಂಗದೊಂದಿಗೆ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀ ಪಾಂಡುರಂಗ – ರುಕ್ಕಿಣಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಮೂಡಲಗಿಯ  ಶ್ರೀ ವಿಠ್ಠಲ ದೇವಸ್ಥಾನ ಕಮಿಟಿಯವರು ತಿಳಿಸಿದ್ದಾರೆ.