ಹುಕ್ಕೇರಿ ತಾಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಿಮಿತ್ತ ಹುಕ್ಕೇರಿಯ ಹಿರೇಮಠದಲ್ಲಿ ಪರಮಪೂಜ್ಯರಾದ ಶ್ರೀ ಷಟಸ್ಥಳ ಬ್ರಹ್ಮ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರನ್ನು ಕಸಾಪ ಹುಕ್ಕೇರಿ ಘಟಕದಿಂದ ಅಧಿಕೃತವಾಗಿ ಆಹ್ವಾನಿಸಿ ಸತ್ಕರಿಸಲಾಯಿತು.
ಹಿರಿಯ ಸಾಹಿತಿಗಳಾದ ಎಸ್ ಎಮ್ ಶಿರೂರ, ಕಿರಣಸಿಂಗ ರಜಪೂತ, ಪ್ರಕಾಶ್ ಹೊಸಮನಿ, ಎಲ್ ವ್ಹಿ ಪಾಟೀಲ, ರಾಜಶೇಖರ್ ಇಚ್ಚಂಗಿ ಕಸಾಪ ಅಧ್ಯಕ್ಷರಾದ ಪ್ರಕಾಶ್ ಅವಲಕ್ಕಿ ಹಾಗು ಪದಾಧಿಕಾರಿಗಳಾದ ಸುಭಾಷ್ ಘಸ್ತಿ, ಸಿಎಂ ದರಬಾರೆ, ಶಿವಾನಂದ ಗುಂಡಾಳಿ, ಬಿ ಬಿ ಅಕ್ಕತಂಗೆರಹಾಳ, ಶ್ರೀಮತಿ ಮಂಜುಳಾ ಅಡಕೆ, ಹಾಗು ಶ್ರೀಮತಿ ಲೀಲಾವತಿ ರಜಪೂತ, ಎಸ್ ನಂಜುಡಪ್ಪಾ ದೇವರಮನಿ ಸರ್, ನಿಜಲಿಂಗಯ್ಯಾ ಹಾಲದೇವರಮಠ ಕರವೇ ಮುಖಂಡರಾದ ರೋಹಿತ್ ತೇಲಿ, ಕುಂಬಾರ ಪರಗೌಡ ಪಾಟೀಲ, ಪಟ್ಟಣಶೆಟ್ಟಿ (ಜರ್ಮನಿ)ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗು ಶ್ರೀಮಠದ ಭಕ್ತರು ಟಿವಿ ಹಾಗು ಪತ್ರಿಕಾ ಮಾಧ್ಯಮ ಮಿತ್ರರು ಉಪಸ್ಧಿತರಿದ್ದು ಅವರ ಆಯ್ಕೆಗೆ ನುಡಿ ಮುಖೇನ ಹರ್ಷ ವ್ಯಕ್ತಪಡಿಸಿದರು
ಸಿಎಂ ದರಬಾರೆ ಶ್ರೀ ಶಿವಾನಂದ ಗುಂಡಾಳಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು