ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ

Must Read

ಮೂಡಲಗಿ : ಪಟ್ಟಣದ ಗಾಂಧಿ ಚೌಕ ಹತ್ತಿರ ಢವಳೇಶ್ವರ ಓಣಿಯಲ್ಲಿರುವ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಲಕ್ಷ್ಮೀದೇವಿ ಜಾತ್ರೆಯು ಗುರುವಾರ ದಿನಾಂಕ 17 ರಂದು ರಾತ್ರಿ 10 ಘಂಟೆಗೆ ವಿವಿಧ ತಂಡದವರಿಂದ ಡೊಳ್ಳಿನ ಪದಗಳು ಜರುಗುತ್ತದೆ, ಶುಕ್ರವಾರ ದಿ. 18 ರಂದು ಬೆಳಿಗ್ಗೆ 7 ಘಂಟೆಗೆ ಅಭಿಷೇಕ , ಉಡಿ ತುಂಬುವ ಕಾರ್ಯಕ್ರಮ ನಂತರ ಮಧ್ಯಾಹ್ನ 12 ಘಂಟೆಗೆ ಅನ್ನ ಪ್ರಸಾದ ಜರುಗುವುದು.

ಸಕಲ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತನು ಮನ ದಿನದಿಂದ ಸೇವೆ ಸಲ್ಲಿಸಿ ಶ್ರೀ ಲಕ್ಷ್ಮೀದೇವಿ ದೇವರ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಶ್ರೀ ಲಕ್ಷ್ಮಿದೇವಿ ಜಾತ್ರಾ ಕಮಿಟಿಯವರು ಮನವಿ ಮಾಡಿದ್ದಾರೆ.


 

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group