ಕಕ್ಕಳಮೇಲಿಯಲ್ಲಿ ಮೇ. 17,18 ಶ್ರೀ ಸೇವಾಲಾಲ ಹಾಗೂ ಜಗದಂಬಾ ಜಾತ್ರಾ ಮಹೋತ್ಸವ

Must Read

ಸಿಂದಗಿ; ತಾಲೂಕಿನ ಕಕ್ಕಳಮೇಲಿ ತಾಂಡಾದ ಬಸವನಗರ, ನಾಯಕ, ಕಾರಭಾರಿ ಇವರ ಮಾರ್ಗದರ್ಶನದಲ್ಲಿ ಮೇ. 17 ಮತ್ತು 18 ರಂದು ಶ್ರೀ ಸೇವಾಲಾಲ ಹಾಗೂ ಜಗದಂಬಾ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.

ಮೇ. 17 ಶುಕ್ರವಾರ ಬೆಳಿಗ್ಗೆ 08-00 ಗಂ. ಶ್ರೀ ಸೇವಾಲಾಲ ಪಲ್ಲಕ್ಕಿ ಮೆರವಣಿಗೆ ಮುಂಜಾನೆ 11-30 ಗಂಟೆಗೆ ಶ್ರೀ ಸೇವಾಲಾಲ ಮಹಾರಾಜರ ಮಹಾಭೋಗ ಕಾರ್ಯಕ್ರಮ ಹಾಗೂ 04-30 ಗಂಟೆಗೆ ಧರ್ಮಸಭೆ ಬಲರಾಮ ಮಹಾರಾಜರು ಗಬುರವಾಡಿ ಇವರ ನೇತೃತ್ವದಲ್ಲಿ ರಾತ್ರಿ 10 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.

18 ರಂದು ಶನಿವಾರ ಸಂಜೆ 06-00 ಗಂಟೆಗೆ ಶ್ರೀ ಜಗದಂಬಾ ದೇವಿ ಹೋಮ ಹವನ, ರಾತ್ರಿ 10-00 ಗಂಟೆಗೆ ಶ್ರೀಮತಿ ಭಾರತಿಬಾಯಿ ಪವಾರ ಸಾ|| ಉಮರಗಾ ಎಲ್.ಐ. ಹಾಗೂ ಶ್ರೀ ರಾಮು ಚವ್ಹಾಣ ಸಾ।। ಜಗಜನ್ನಿ ತಾ|| ಇಂಡಿ ಇವರಿಂದ ಭಜನಾ ಕಾರ್ಯಕ್ರಮ ಸಮಸ್ತ ಶ್ರೀ ಗುರು-ಹಿರಿಯರ ಸಮ್ಮುಖದಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಜರುಗುವವು.

ಕಾರಣ ಸುತ್ತಮುತ್ತಲಿನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸೇವಾಲಾಲ ಹಾಗೂ ಜಗದಂಬಾ ದೇವಿಯ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group