spot_img
spot_img

ಆರು ಗ್ರಾಮಗಳನ್ನ ಬರಪಿಡಿತ ಪ್ರದೇಶ ಎಂದು ಘೋಷಿಸಬೇಕೆಂದು ಆಗ್ರಹಿಸಿ ಮನವಿ

Must Read

- Advertisement -

ಮೂಡಲಗಿ: ತಾಲೂಕಿನ ವೆಂಕಟಾಪೂರ, ಕುಲಗೋಡ, ಢವಳೇಶ್ವರ, ಅವರಾದಿ, ತಿಮ್ಮಾಪೂರ, ಅರಳಿಮಟ್ಟಿ ಗ್ರಾಮಗಳು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಆಗ್ರಹಿಸಿ ಗ್ರಾಮಗಳ ರೈತರು, ಗುರುವಾರದಂದು ಮೂಡಲಗಿ ತಹಶೀಲ್ದಾರ ಬಿ ಎಸ್ ಕಡಕಬಾವಿ ಅವರಿಗೆ ಮನವಿಸಲ್ಲಿಸಿದರು.

ತಾಲೂಕಿನಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಬರಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಬರಪೀಡಿತ 13 ಗ್ರಾಮಗಳನ್ನು ಮಾತ್ರ ಗುರುತಿಸಲಾಗಿದೆ. ನಿಗದಿತ ಸಮಯಕ್ಕೆ ಮಳೆ ಬಾರದೇ ಜಮೀನುಗಳಲ್ಲಿ ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ
ಆರು ಗ್ರಾಮಗಳುನ್ನು ಬರಪಿಡಿತ ಪ್ರದೇಶ ಇದೆಯೋ ಅಥವಾ ಇಲ್ಲವೋ ಎಂದು ಸ್ಥಳೀಯ ಅಧಿಕಾರಿಗಳು ಖಚಿತ ಪಡಿಸಿಕೊಂಡು ಗ್ರಾಮಗಳನ್ನು ಬರಪೀಡಿತ ಪ್ರದೇಶ ಅಂತಾ ಘೋಷಿಸಿ ಮತ್ತು ಬರಗಾಲದಿಂದ ಬೆಳೆ ನಷ್ಟವಾದ ರೈತರಿಗೆ ನ್ಯಾಯ ಒದಗಿಸಿ ಬರಪರಿಹಾರ ಹಣವನ್ನು ನೀಡಬೇಕೆಂದು ಮನವಿಸಲ್ಲಿಸಿದರು.

ರೈತರಿದಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ ಬಿ ಎಸ್ ಕಡಕಬಾವಿ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

- Advertisement -

ಈ ಸಮಯದಲ್ಲಿ ರೈತರಾದ ವೆಂಕಪ್ಪ ಪಾಟೀಲ, ರಂಗಪ್ಪ ಅರಳಿಮಟ್ಟಿ, ಶೇಶಪಗೌಡ ಪಾಟೀಲ, ತಿಮ್ಮಣ್ಣ ಢವಳೇಶ್ವರ, ಗೋವಿಂದ ಕೋಳಿಗುಡ್ಡ, ಶೇಖರ ನಾಯಕ್, ಶ್ರೀಕಾಂತ ನಾಯಕ್, ಲಕ್ಷ್ಮಣ ಪರೀಟ, ರಾಮಪ್ಪ ಪೆಟ್ಟಲೂರ, ಸಿದ್ದಪ್ಪ ಯರಗುದ್ರಿ, ವೆಂಕಪ್ಪ ಕೋಳಿಗುಡ್ಡ ಮತ್ತಿತರರು ಇದ್ದರು.

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group