Homeಸುದ್ದಿಗಳುಹಳ್ಳೂರ ಗ್ರಾಮದ ಶ್ರೀ ಸಿದ್ಧಾರೂಢ ಪರಮಾರ್ಥ ಮಹೋತ್ಸವ ಶುಕ್ರವಾರ ಪ್ರಾರಂಭ

ಹಳ್ಳೂರ ಗ್ರಾಮದ ಶ್ರೀ ಸಿದ್ಧಾರೂಢ ಪರಮಾರ್ಥ ಮಹೋತ್ಸವ ಶುಕ್ರವಾರ ಪ್ರಾರಂಭ

spot_img

ಹಳ್ಳೂರ – ಶ್ರೀ ಮಹಾಲಕ್ಷ್ಮಿಯ ನಿವಾಸ ಸ್ಥಾನವೆನಿಸಿದ ಸುಕ್ಷೇತ್ರ ಹಳ್ಳೂರ ಗ್ರಾಮದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಪರಮಾರ್ಥ ಮಹೋತ್ಸವವು ಶುಕ್ರವಾರದಿಂದ ರವಿವಾರದವರೆಗೆ ಜರುಗುತ್ತದೆ.

ದಿನಾಲು ಪ್ರವಚನ ನೀಡಿಲಿರುವ ಮಹಾಸ್ವಾಮಿಗಳು ನಾಗರಾಳ ಶ್ರೀ ಜ್ಞಾನೇಶ್ವರ ಮಹಾಸ್ವಾಮಿಗಳು. ಜೋಡಕುರಳಿ ಶ್ರೀ ಚಿದ್ಘನಾನಂದ ಮಹಾಸ್ವಾಮಿಗಳು, ಶೇಗುಣಸಿ ಮಹಾಂತ ಪ್ರಭು ಮಹಾಸ್ವಾಮಿಗಳು, ನಾಗರಾಳ ಅನಂತಾನಂದ ಶರಣರು, ತಿಕೋಟಾ ಶ್ರೀ ಶಿವಾನಂದ ಮಹಾಸ್ವಾಮೀಜಿಗಳಿಂದ ಪ್ರವಚನ ಜರುಗುವುದು.

ಶುಕ್ರವಾರ, ಶನಿವಾರದಂದು ಸಾಯಂಕಾಲ ಪ್ರವಚನ , ರವಿವಾರದಂದು ಮುಂಜಾನೆ ಸದ್ಗುರು ಸಿದ್ಧಾರೂಢ ಭಾವ ಚಿತ್ರ ದೊಂದಿಗೆ ಪಲ್ಲಕ್ಕಿ ಉತ್ಸವ ನಡೆದು ನಂತರ ಮಹಾತ್ನರಿಂದ ಪ್ರವಚನ ಜರುಗಿ ಮಧ್ಯಾಹ್ನ ಕಾರ್ಯಕ್ರಮ ಮಂಗಲಗೊಳ್ಳುವುದು. ಶುಕ್ರವಾರ ಮುಂಜಾನೆ ಶ್ರೀ ಸಿದ್ಧಾರೂಢ ದೇವರಿಗೆ ವಿಶೇಷ ಮಹಾ ಪೂಜೆ ಅಭಿಷೇಕ ನಡೆದು ನಂತರ ಓಂಕಾರ ಧ್ವಜಾರೋಹಣ ನೆರವೇರುವುದು. ಸಂಜೆ 7 ಗಂಟೆಗೆ ಭಜನಾ ಕಾರ್ಯಕ್ರಮ ಜರುಗುವುದು.8 ಗಂಟೆಗೆ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ ದಿನಾಲೂ ಊಟದ ವ್ಯವಸ್ಥೆ ಇರುತ್ತದೆ ಆದಕಾರಣ ಮೂರು ದಿನಗಳ ಕಾಲ ನಡೆಯುವ ಪರಮಾರ್ಥ ಮಹೋತ್ಸವ ಕಾರ್ಯಕ್ರಮದಲ್ಲಿ ಹಳ್ಳೂರ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿ ಶ್ರೀ ಸಿದ್ಧಾರೂಢ ದೇವರ ಪ್ರೀತಿಗೆ ಪಾತ್ರರಾಗಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group