ಸಿಂದಗಿ: ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ದಣ್ಣ ಹಿರೇಕುರಬರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ನಿಂಗಣ್ಣ ಬಿರಾದಾರ ಘೋಷಣೆ ಮಾಡಿದರು.
ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 14 ಜನ ಚುನಾಯಿತ ಸದಸ್ಯರಲ್ಲಿ ಸಿದ್ದಣ್ಣ ಹಿರೇಕುರಬರ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅಲ್ಲದೆ ಹಂಗಾಮಿ ಅಧ್ಯಕ್ಷರಾಗಿದ್ದ ಪ್ರಕಾಶ ಪಡಶೆಟ್ಟಿ ಉಪಾಧ್ಯಕ್ಷರಾಗಿ ಮುಂದುವರೆದಿದ್ದಾರೆ.
ವಿಜಯೋತ್ಸವ: ಎಪಿಎಂಸಿ ಅಧ್ಯಕ್ಷರ ಆಯ್ಕೆಯಲ್ಲಿ 10 ತಿಂಗಳ ಅವಧಿ ನಿಗದಿ ಪಡಿಸಲಾಗಿತ್ತು. ಪಕ್ಷದ ಆದೇಶದಂತೆ ಗೋಲ್ಲಾಳಪ್ಪ ರೂಗಿಯವರು ಕೆಲ ದಿನಗಳ ಹಿಂದೆ ರಾಜನಾಮೆ ಸಲ್ಲಿಸಿದ್ದರು ಆ ತೆರವಾದ ಸ್ಥಾನಕ್ಕೆ ಒಟ್ಟು 14 ಜನ ಸದಸ್ಯರಲ್ಲಿ 13 ಜನರು ಕಾಂಗ್ರೆಸ್ ಪಕ್ಷದ ಸಿದ್ದಣ್ಣ ಹಿರೇಕುರಬರ ಅವರನ್ನು ಅವಿರೋಧವಾಗಿ ಆಯ್ಕೆಯಾಗುವಲ್ಲಿ ತಮ್ಮ ಬೆಂಬಲ ನೀಡಿದ್ದು ಇದಕ್ಕೆ ಶ್ರಮಿಸಿದ ಎಲ್ಲ ನಾಯಕರಿಗೂ ಪಕ್ಷದ ಪರವಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಐ.ಎಸ್.ಔರಂಗಾಬಾದ, ಶಿರಸ್ತೆದಾರ ಸಿ.ಬಿ.ಬಾಬಾನಗರ, ಎಸ್.ಬಿ.ಹೆಬ್ಬಾಳ, ಕಾಂಗ್ರೆಸ್ ಉಪಚುನಾವಣೆ ಅಭ್ಯರ್ಥಿ ಅಶೋಕ ಮನಗೂಳಿ, ಮುಖಂಡರಾದ ಬಿ.ಎಸ್.ಪಾಟೀಲ ಯಾಳಗಿ, ಶರಣಪ್ಪ ಸುಣಗಾರ, ನರಸಿಂಗಪ್ರಸಾದ ತಿವಾರಿ, ಶರಣಪ್ಪ ವಾರದ, ಎಸ್.ಎಂ.ಪಾಟೀಲ ಗುಂದಗಿ ವಕೀಲರು, ಉಮೇಶ ಜೋಗುರ, ಶಾಂತೂ ಬಿರಾದಾರ, ಮುಸ್ತಾಕ ಮುಲ್ಲಾ, ಹಳ್ಳೆಪ್ಪಗೌಡ ಚೌಧರಿ, ಭೀಮರಾಯ ಅಮರಗೋಳ, ಸಂತೋಷ ಹರನಾಳ ಶಂಕ್ರಯ್ಯ ಹಿರೇಮಠ, ಯೋಗಪ್ಪಗೌಡ ಪಾಟೀಲ, ಎಮ್ ಎ ಖತೀಬ, ಯುವ ಕಾಂಗ್ರೆಸ ಅಧ್ಯಕ್ಷ ಇರ್ಪಾನ ಆಳಂದ, ರಾಘವೇಂದ್ರ ಪೂಜಾರಿ, ಅಮೀತ ಚವ್ಹಾಣ, ನಿಂಗಣ್ಣ ಸಾಲಿ ಮಲ್ಲು ಘತ್ತರಗಿ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.