ಸಿದ್ದರಾಮಯ್ಯಗೆ  ವಯಸ್ಸಾಗಿದೆ ಹೀಗಾಗೀ ಟ್ರಾಕ್ ಬಿಡುತ್ತಿದ್ದಾರೆ – ಪ್ರಭು ಚವ್ಹಾಣ

Must Read

ಬೀದರ – ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ವಯಸ್ಸಾಗಿದೆ ಹೀಗಾಗಿ ಟ್ರಾಕ್ ಬಿಡುತ್ತಿದ್ದಾರೆ ಎಂಬುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಲೇವಡಿ ಮಾಡಿದರು.

ಸಚಿವ ಶೀರಾಮುಲು ಕೋಳಿ ಸಮಾಜಕ್ಕೆ ಮೋಸ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಮಾಜಿ ಸಿಎಂ ಆಗಿ ಅವರು ಈ ರೀತಿ ಅನ್ ಪಾರ್ಲಿಮೆಂಟರಿ ಶಬ್ದ ಬಳಸಬಾರದು ಎಂದರು.

ರಾಹುಲ್ ಗಾಂಧಿಯವರೆ ಮೊದಲು ಕಾಂಗ್ರೆಸ್ ಪಕ್ಷ ಜೋಡಿಸಿರಿ ಎಂದ ಅವರು, ಕಾಂಗ್ರೇಸ್ ನಲ್ಲಿ ಸಿದ್ದು, ಡಿಕೆಶಿ ಹಾಗೂ ಎಂಬಿ ಪಾಟೀಲ್ ಎಂಬ ಗುಂಪುಗಳಾಗಿವೆ ಎಂದರು.

ಇದೇ 18 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಸಿಪೆಡ್ ಭೂಮಿ ಪೂಜೆ ಮಾಡುತ್ತಾರೆ.ಮಾಜಿ ಸಿಎಂ ಬಿಎಸ್ ವೈ, ಸಚಿವರಾದ ಶ್ರೀರಾಮುಲು, ಗೋವಿಂದ ಕಾರಜೋಳ ಸೇರಿದಂತೆ ಅನೇಕ‌ ನಾಯಕರು ಭಾಗಿಯಾಗುತ್ತಾರೆ. ಬಳಿಕ ಔರಾದ್ ನಲ್ಲಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಜನ ಸಂಕಲ್ಪ ಯಾತ್ರೆಯಲ್ಲಿ 50 ಸಾವಿರ ಜನ ಸೇರುತ್ತಾರೆ ಎಂದು ಮಾಹಿತಿ ನೀಡಿದರು.

ಔರಾದ್ ನ ಅಮರೇಶ್ವರ ಕಾಲೇಜು ಮೈದಾನದಲ್ಲಿ  ನಡೆಯಲಿರುವ ಜನ ಸಂಕಲ್ಪ ಯಾತ್ರೆಯ ಪೂರ್ವ ಸಿದ್ಧತೆಗಳನ್ನು ವೀಕ್ಷಿಸಿದ ಸಚಿವರು,  ಸಿಪೆಡ್ ಭೂಮಿ ಪೂಜೆ ನಡೆಯುವ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group