Homeಸುದ್ದಿಗಳುಮಂಜುಳಾ ತಾಯಿಯವರ ಮೌನಾನುಷ್ಠಾನ ಮುಕ್ತಾಯ ಸಮಾರಂಭ

ಮಂಜುಳಾ ತಾಯಿಯವರ ಮೌನಾನುಷ್ಠಾನ ಮುಕ್ತಾಯ ಸಮಾರಂಭ

ಸಿಂದಗಿ;  ಪ್ರತಿಶತ ೯೯ರಷ್ಟು ಜನ ವಿಶ್ವದಲ್ಲಿ ಮಾತನಾಡುತ್ತಾ ಇರುತ್ತಾರೆ ಆದರೆ ಮೌನವಾಗಿರುವವರು ಅರ್ಧದಷ್ಠು ಮಾತ್ರ ಇರುತ್ತಾರೆ ಮಾತನಾಡುವವರು ಮಧ್ಯದಲ್ಲಿ ಒಂದು ಪರ್ಯಂತ ಮೌನವಾಗಿರುವವರು ಎಂದರೆ ಮಂಜುಳಾ ತಾಯಿಯಂತವರು ಮಾತ್ರ ಎಂದು ಹುಬ್ಬಳ್ಳಿ ಮೂರುಸಾವಿರಮಠ ಮಹಾಸಂಸ್ಥಾನ ಜಗದ್ಗುರು ಡಾ. ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸಾತವೀರೇಶ್ವರ ಸಭಾ ಭವನದಲ್ಲಿರುವ ಶ್ರೀ ರೊಟ್ಟಿ ಲಿಂಗೇಶ್ವರ ದೇವಸ್ಥಾನದಲ್ಲಿ ಬಳಗಾನೂರ ಗ್ರಾಮದ ಪೂಜ್ಯಶ್ರೀ ಶಿವಶರಣೆ ಮಂಜುಳಾ ತಾಯಿಯವರು ಲೋಕ ಕಲ್ಯಾರ್ಥವಾಗಿ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡ ಮೌನಾನುಷ್ಠಾನದ ಮುಕ್ತಾಯ ಸಮಾರಂಭದ ಪಾವನ ಸಾನ್ನಿಧ್ಯವಹಿಸಿ ಮಾತನಾಡಿದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದಂತದ್ದು ಈ ದೇಶದಲ್ಲಿರುವ ಸಂಸ್ಕೃತಿ ಬೇರಾವ ದೇಶದಲ್ಲಿಯೂ ಸಿಗದು. ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ಮಾಡಿದ ಸಾಧನೆಗಳು ನಮಗೆ ದಾರಿ ದೀಪವಾಗಿವೆ. ನಮ್ಮ ಧರ್ಮದ ನಡೆ ನುಡಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದಿನ ಯುವ ಜನಾಂಗ ಧಾರ್ಮಿಕ ಕಾರ್ಯಕ್ರಮಗಳನ್ನು  ಮರೆತ್ತಿದ್ದಾರೆ. ಅವರು ಬಿಟ್ಟು ಹೋದ ನಮ್ಮ ಸಂಸ್ಕೃತಿನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಸ್ಕಾರ ಎಲ್ಲಿ ದೊರೆಯುತ್ತದೆ ಎಂದರೆ ನಮ್ಮ ಸನಾತನ ಧರ್ಮದಲ್ಲಿ ಸಿಗುತ್ತದೆ. ದಾರ್ಮಿಕ ಕಾರ್ಯಕ್ರಮದ ಮೂಲಕ ಸಂಸ್ಕಾರ ದೊರಕಿಸಿಕೊಟ್ಟು ಲೋಕ ಕಲ್ಯಾಣಾರ್ಥವಾಗಿ ಅನುಷ್ಠಾನ ಗೈದ ಮಹಾತಾಯಿಯವರಿಗೆ ಅಭಿನಂದನೆಗಳು ಎಂದರು.

ಮೌನ ಅನುಷ್ಠಾನ ಗೈದ ಮಂಜುಳಾ ತಾಯಿ ಮಾತನಾಡಿ, ಅನಾದಿಕಾಲದಿಂದ ಮನುಕುಲಕ್ಕೆ ರೊಟ್ಟಿಯ ಮಹತ್ವವನ್ನು ಅರಿವು ಕೊಟ್ಟ ರೊಟ್ಟಿ ಲಿಂಗೇಶ್ವರರಲ್ಲಿ ಒಂದು ದೊಡ್ಡ ಶಕ್ತಿಯಿದೆ. ಇಂತಹ ಮಹಾತ್ಮರಿಂದ ಆಧ್ಯಾತ್ಮಿಕ ಜ್ಞಾನ ದೊರೆಯುತ್ತದೆ. ಈ ಅನುಷ್ಠಾನ ಸಿಂದಗಿ ಜನತೆಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

ಸಾನ್ನಿಧ್ಯ ವಹಿಸಿದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ಈ ಭೂಮಿಯಲ್ಲಿ ಬಂಗಾರದ ಬೆಳೆಯಿದೆ. ಅದನ್ನು ಬಿತ್ತಿ ಬೆಳೆದುಕೊ ಎಂದು ಪೂಜ್ಯಶ್ರೀ ಚೆನ್ನವೀರ ಸ್ವಾಮಿಜಿಗಳು ಹೇಳುತ್ತಿದ್ದರು ಅದನ್ನು ಸಿದ್ದ ಪಡಿಸಿದ್ದು ಶಿವಶರಣೆ ಮಂಜುಳಾ ತಾಯಿಯವರ ಈ ಮೌನಾನುಷ್ಠಾನದ ಆಧ್ಯಾತ್ಮಿಕ ಜ್ಞಾನದ ಅನುಭವದಿಂದ ಗೊತ್ತಾಗಿದೆ ಎಂದು ತಿಳಿಸಿದರು.

ಕೊಟ್ಟುರು ಜಾನುಕೋಟೆಮಠದ ಡಾ. ಸಿದ್ಧಲೀಂಗ ಶಿವಾಚಾರ್ಯರು, ಶಹಾಪುರ ಸುಗೂರೇಶ್ವರ ಶಿವಾಚಾರ್ಯರು, ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಶಿವಶರಣೆ ರೇಣುಕಾದೇವಿ, ಸಹಕಾರಿ ದುರೀಣ ಶಿವನಗೌಡ ಬಿರಾದಾರ, ಶಿವಪ್ಪಗೌಡ ಬಿರಾದಾರ, ಅಶೋಕ ವಾರದ ವೇದಿಕೆ ಮೇಲಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group