Sindagi: ಜೈನ ಮುನಿಗಳಿಗೆ ಸೂಕ್ತ ಭದ್ರತೆಗೆ ಸಕಲ ಜೈನ ಸಮಾಜದಿಂದ ಮನವಿ

Must Read

ಸಿಂದಗಿ: ರಾಜ್ಯ ಸರ್ಕಾರ ಜೈನ ಮುನಿಗಳಿಗೆ ಸೂಕ್ತ ಭದ್ರತೆ ಹಾಗೂ ರಕ್ಷಣೆ ನೀಡಬೇಕೆಂದು ತಾಲೂಕು ಸಕಲ ಜೈನ ಸಮಾಜದ ವತಿಯಿಂದ ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎನ್.ಆರ್.ಪೋರವಾಲ ಮಾತನಾಡಿ, ಚಿಕ್ಕೋಡಿಯಲ್ಲಿ ಜೈನ ಮುನಿಗಳನ್ನು ಅಮಾನವೀಯವಾಗಿ ಕೊಲೆ ಮಾಡಿದ್ದು ಖಂಡನೀಯ, ಜೀವಿಸು ಜೀವಿಸಲು ಬಿಡಿ ಎಂಬ ಧೇಯದೊಂದಿಗೆ ಜೈನ ಧರ್ಮ ಜನಾಂಗ ಬದುಕುತ್ತಿದೆ. ಈಗ ನಮ್ಮ ಸಮಾಜದ ಕಾಮಕುಮಾರ ನಂದಿ ಮಹಾರಾಜರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.  ಜೈನ ಸಮಾಜವು ಭಯದ ಬೀತಿಯಲ್ಲಿದೆ. ಕಾರಣ ನಮ್ಮ ಸಮುದಾಯದ ಮುನಿಗಳು, ಮಾತಾಜಿಯವರಿಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಮತ್ತು ರಕ್ಷಣೆಯನ್ನು ನೀಡಬೇಕು ಮತ್ತು ಮುನಿಗಳ ಹತ್ಯೆಯ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನಾತ್ಮಕ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಅಭಯ ಕಾಗಿ, ಮೋಹಿತ ಜೈನ್, ಡಿ.ಪಿ.ಶೆಟ್ಟಿ, ಜಿನೇಂದರ ಮಳ್ಳಿ, ನಾಗಪ್ಪ ಮಳ್ಳಿ, ಭರಮಣ್ಣ ಸುರಪುರ, ಬಾಹುಬಲಿ ಮಳ್ಳಿ, ಹೇಮಾ ಕಾಸರ, ಜಗದೀಶ ಭೋಗಾರ, ವಿ.ಡಿ.ಪಾಟೀಲ, ಸಿದ್ದರಾಯ ಒಣಕುದರಿ, ಪ್ರವೀಣ, ಸಂಪತ್, ಬಾಹುಬಲಿ ಒಣಕುದರಿ, ಪಾಶ್ವನಾಥ ಕಾಸದ, ಪುಷ್ಪ ಪೋರವಾಲ, ಅಖೀಲ ಪೋರವಾಲ, ಕಿರಣ ಪೋರವಾಲ, ಭರತೇಶ ಧನಪಾಲ ಸೇರಿದಂತೆ ಅನೇಕರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group