ಸಿಂದಗಿ : ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ನಡೆಯಿತು.
ಶಾಸಕ ಅಶೋಕ ಮನಗೂಳಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಸಿಂದಗಿ
ತಹಶೀಲ್ದಾರ ಕರಿಯಪ್ಪ ಬೆಳ್ಳಿ ಅವರ ಎಡವಟ್ಟಿನಿಂದ ಉಲ್ಟಾ
ಧ್ವಜಾರೋಹಣ ಮಾಡಲಾಗಿದೆ ಎಂದು ಆರೋಪಿಸಿರುವ
ಸಾರ್ವಜನಿಕರು ಹಾಗೂ ವಿವಿಧ ಕನ್ನಡಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಪರ ಸಂಘಟನೆಯ ಮುಖಂಡ ಸಂತೋಷ
ಮಣಿಗೇರಿ, ನಿಂಗರಾಜ ಆತನೂರ ಸೇರಿದಂತೆ ವಿವಿಧ
ಕನ್ನಡಪರ ಸಂಘಟನೆ ಮುಖಂಡರು ವಿರೋಧ
ವ್ಯಕ್ತಪಡಿಸಿದರು. ರಾಷ್ಟ್ರಧ್ವಜ ಅರಳಿ ಜನ ಗಣ ಮನ ಆರಂಭವಾಗಿ ಅತಿಥಿಗಳು ತಲೆ ಎತ್ತಿ ಧ್ವಜಕ್ಕೆ ಸೆಲ್ಯೂಟ್
ಮಾಡುವಷ್ಟರಲ್ಲಿ ನಡೆದ ಅಚಾತುರ್ಯ ಎಲ್ಲರ
ಗಮನಕ್ಕೆ ಬಂತು. ತಲೆ ಕೆಳಗಾಗಿದ್ದ ಧ್ವಜವನ್ನು
ತಕ್ಷಣವೇ ಕೆಳಕ್ಕಿಳಿಸಿ ಕ್ಷಣ ದಲ್ಲಿ ಮರು ಆರೋಹಣಗೊಳಿಸುತ್ತಿರುವಾಗಲು ರಾಷ್ಟ್ರಗೀತೆ ಹಾಡಿ ಮೋಟಕುಗಳಿಸಲಾಯಿತು.
ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅವಲೋಕಿಸುತ್ತಿರುವ ಜಿಲ್ಲಾಧಿಕಾರಿಗಳು ಯಾವ ಕ್ರಮ ಜರುಗಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ

