Homeಸುದ್ದಿಗಳುSindagi: ದೇವಣಗಾಂವ ಗ್ರಾಮದಲ್ಲಿ ಆರೋಗ್ಯ ಮತ್ತು ಪೋಷಣ ಸಮೀಕ್ಷೆ

Sindagi: ದೇವಣಗಾಂವ ಗ್ರಾಮದಲ್ಲಿ ಆರೋಗ್ಯ ಮತ್ತು ಪೋಷಣ ಸಮೀಕ್ಷೆ

ಸಿಂದಗಿ: ಸರಕಾರ ಉತ್ತಮ ನೀತಿಗಳನ್ನು ರೂಪಿಸುವ ಉದ್ದೇಶ ಹಾಗೂ ಇಲಾಖೆಗಳಿಗೆ ಸಹಾಯಕವಾಗುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್‍ ಆಪ್ ಮೂಲಕ ಸಮೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಎಸ್.ಐ.ಕಲಶೆಟ್ಟಿ ಹೇಳಿದರು.

ದೇವಣಗಾಂವ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಮೀಕ್ಷೆ ಪ್ರಾರಂಭಿಸಿ ಮಾತನಾಡುತ್ತಿದ್ದರು. ಅಪೌಷ್ಠಿಕತೆ, ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ, ಹೆಚ್ಚಿನ ಅಪಾಯದ ಗರ್ಭಧಾರಣೆ, ಕುಟುಂಬ ಯೋಜನೆ ವಿಧಾನ, ಅನುವಂಶೀಯ ಕಾಯಿಲೆ ಹಾಗೂ ವಿಕಲಚೇತನರ ಗುರುತಿಸುವಿಕೆ ಸೇರಿದಂತೆ 30 ವರ್ಷ ವಯಸ್ಸಿನ ಮೇಲ್ಪಟ್ಟವರ ಎನ್‍ಸಿಡಿ ಪೋರ್ಟಲ್‍ಗೆ ಆಧಾರ ಕಾರ್ಡ ಲಿಂಕ್ ಮಾಡಲಾಗುತ್ತಿದೆ ಎಂದರು.

ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಭಾಗ್ಯಶ್ರೀ ವಾಲಿಕಾರ ಮೇಲ್ವಿಚಾರಣೆ ಮಾಡಿದರು, ಬಸವರಾಜ ತಾವರಖೇಡ, ಅಂಗನವಾಡಿ ಕಾರ್ಯಕರ್ತೆ ಎಂ.ಆರ್.ಕುಲಕರ್ಣಿ, ಆಶಾ ಕಾರ್ಯಕರ್ತೆ ಸಂಗೀತಾ ರಜಪುತ, ಮಹಾದೇವಿ ಸುತಾರ ಇದ್ದರು.

RELATED ARTICLES

Most Popular

error: Content is protected !!
Join WhatsApp Group