ಬೀದರ – ಒಮ್ಮಿಂದೊಮ್ಮೆಲೆ ಸಿಂಧೂ ನದಿಯ ನೀರನ್ನು ಪಾಕಿಸ್ತಾನಕ್ಕೆ ಬಂದ್ ಮಾಡಲು ಬರುವುದಿಲ್ಲ ಅದಕ್ಕೆ ಕನಿಷ್ಠ ೨೦ ವರ್ಷಗಳು ಬೇಕು ಆದ್ದರಿಂದ ಏನು ಆಗುವುದೋ ಅದನ್ನಷ್ಟೇ ಮೋದಿಯವರು ಹೇಳಬೇಕು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
ಬೀದರನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ಪಹಲ್ಗಾಮ ದಾಳಿಯಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಸ್ಲಿಮರು ಕೇಂದ್ರ ಸರ್ಕಾರದ ಜೊತೆ ಇದ್ದಾರೆ. ಪ್ರವಾಸಕ್ಕೆ ಹೋದವರ ಮೇಲೆ ದಾಳಿ ಮಾಡಿದ್ದು ಸರಿಯಲ್ಲ. ಉಗ್ರರಿಂದ ಕಾಶ್ಮೀರಿ ಜನರಿಗೂ ತೊಂದರೆಯಾಗಿದೆ ಎಂದರು.
ಟೆರರಿಸ್ಟ್ ಗಳು ಅಂದರೆ ಟೆರರಿಸ್ಟಗಳು ಅಷ್ಟೆ. ಹಿಂದೂ ಮುಸ್ಲಿಮರನ್ನು ಬೇರ್ಪಡಿಸಲು ಧರ್ಮ ಕೇಳಿ ಗುಂಡು ಹಾಕಿದ್ದಾರೆ. ಕೇಂದ್ರ ಕೂಡ ನಮ್ಮಲ್ಲಿ ಭೇದ ಭಾವ ಮಾಡುತ್ತಿದೆ. ವಕ್ಫ್ ನಲ್ಲಿ ಎಲ್ಲಾ ಸಮುದಾಯದ ಜನರನ್ನು ಹಾಕುತ್ತಿದ್ದಾರೆ ಇದು ಸರಿಯಲ್ಲ ವಕ್ಫ್ ಬಿಲ್ ವಾಪಸ್ ಪಡೆಯಬೇಕು ಎಂದು ರಹೀಮ್ ಖಾನ್ ಆಗ್ರಹಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ