- Advertisement -
ಮೈಸೂರು ಜಿಲ್ಲಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂಘದ ಅಧ್ಯಕ್ಷರಾಗಿ ವರುಣ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಪ್ರಾಂಶುಪಾಲರಾದ ಶ್ರೀಮತಿ ಹೆಚ್.ಹೆಚ್.ರಾಜೇಶ್ವರಿ ಆಯ್ಕೆಯಾದರು.
ಇಂದು ಇಲಾಖೆಯಲ್ಲಿ ನಡೆದ ಮೈಸೂರು ಜಿಲ್ಲಾ ಪ್ರಾಂಶುಪಾಲರ ಸಭೆಯಲ್ಲಿ ಎಲ್ಲಾ ಪ್ರಾಂಶುಪಾಲರುಗಳು ಸರ್ವಾನುಮತದಿಂದ ರಾಜೇಶ್ವರಿ ಅವರ ಆಯ್ಕೆ ಮಾಡಿದರು.
ಕಾರ್ಯಕ್ರಮ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮರಿಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷರಾಗಿ ಹನುಮಂತರಾವ್, ಕಾರ್ಯದರ್ಶಿಯಾಗಿ ಸೋಮಶೇಖರ್ ಹಾಗೂ ಪ್ರಾಂಶುಪಾಲರಾದ ರಮಾನಂದ, ಚಿದಾನಂದ, ಸುದೀಪ್, ಶ್ರೀಮತಿ ಕೋಮಲ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಬೋಧಕೇತರ ಸಂಘದ ಅಧ್ಯಕ್ಷರಾದ ರಾಜ್‌ಕುಮಾರ್ ಎಂ ರವರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.