ಅ.21 ರಂದು ಅವಿಶ್ವಾಸ ನಿರ್ಣಯದ ವಿಶೇಷ ಸಾಮಾನ್ಯ ಸಭೆ

0
255

ಸಿಂದಗಿ: ಅವಿಶ್ವಾಸ ನಿರ್ಣಯದ ಕುರಿತು ವಿಶೇಷ ಸಾಮಾನ್ಯ ಸಭೆಯನ್ನು ಅ. 21 ರಂದು ಬೆಳಿಗ್ಗೆ 11 ಗಂಟೆಗೆ ಪುರಸಭೆ ಸಭಾ ಭವನದಲ್ಲಿ  ಕರೆಯಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂಡಿ ಉಪವಿಭಾಗಾಧಿಕಾರಿಗಳವರ ಆದೇಶ ಅ. 07 ರ ಪ್ರಕಾರ ಅವಿಶ್ವಾಸ ಗೊತ್ತುವಳಿ ಮಂಡನೆಗಾಗಿ ವಿಶೇಷ ಸಾಮಾನ್ಯ ಸಭೆಯನ್ನು ಕರೆಯಲು ಕೋರಿ 15 ಜನ ಸದಸ್ಯರವರ ಅರ್ಜಿ ಸೆ. 23 ರನ್ವಯ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ತಿಳಿಸಿದ್ದಾರೆ.

ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲು ವಿಶೇಷ ಸಾಮಾನ್ಯ ಸಭೆಯನ್ನು ಕರೆಯುವಂತೆ ಸದಸ್ಯರ ಮನವಿ ಮೇರೆಗೆ  ಇಂಡಿ ಉಪವಿಭಾಗಾಧಿಕಾರಿಗಳು ಕಳೆದ ಜ. 24 ರಂದು ನಡೆದ ಅವಿಶ್ವಾಸ ಸಭೆಯನ್ನು ರದ್ದುಗೊಳಿಸಿದ ಆದೇಶ ಮೇರೆಗೆ ಅ. 21 ರಂದು ಶುಕ್ರವಾರ ಬೆಳಿಗ್ಗೆ 11-00 ಗಂಟೆಗೆ ಪುರಸಭೆ ಸಭಾ ಭವನದಲ್ಲಿ ವಿಶೇಷ ಸಾಮಾನ್ಯ ಸಭೆಯನ್ನು ಕರೆಯಲಾಗಿದ್ದು ಎಲ್ಲಾ ಸದಸ್ಯರು ತಪ್ಪದೇ ಸದರಿ ಸಭೆಯಲ್ಲಿ ಉಪಸ್ಥಿತರಿರಲು ಪ್ರಕಟಣೆಯ ಮೂಲಕ ಕೋರಿದ್ದಾರೆ.