ಬಾಗಲಕೋಟೆ – ಮಾತು ಮಾಣಿಕ್ಯದಂತಿರಬೇಕು. ಮಾತು ಮಂತ್ರದಂತಿರಬೇಕು .ಶರಣರ ಮಾತುಗಳನ್ನು ಮನವಿಟ್ಟು ಕೇಳಬೇಕು. ಮಾತುಗಳನ್ನು ಗಮನ ಇಟ್ಟು ಕೇಳಿಸಿಕೊಳ್ಳುವುದು ಒಂದು ತಪಸ್ಸು ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.
ಅವರು ಬಾದಾಮಿ ತಾಲೂಕಿನ ಸುಕ್ಷೇತ್ರ ಜಾಲಿಹಾಳ ಗ್ರಾಮದ ಲೋಕಮಾತಾ ಮಂದಿರದಲ್ಲಿ ನಡೆದ “ನವರಾತ್ರಿ ಸಂಭ್ರಮ -2025″ರ ಕಾರ್ಯಕ್ರಮದಲ್ಲಿ 11 ದಿನಗಳ ಕಾಲ ಶ್ರೀ ದೇವಿ ಪುರಾಣವನ್ನು ನಡೆಸಿ ಸಮಾರೋಪದಲ್ಲಿ ಮಾತನಾಡುತ್ತಾ ಕ್ಷುಲ್ಲಕ ಮಾತುಗಳಿಗೆ ಕಿವಿ ಕಿವಿಗೊಡದೆ ಆದರ್ಶದ ನುಡಿಗಳನ್ನು ಕೇಳಿಸಿಕೊಳ್ಳಬೇಕು. ಶರಣರ, ಸಂತರ, ಮಹಾತ್ಮರ ಮಾತುಗಳನ್ನು ಯಾವತ್ತೂ ಮೆಲುಕು ಹಾಕುತ್ತಿರಬೇಕು. ಅನುಷ್ಠಾನಕ್ಕೂ ತರುವಂತಾಗಬೇಕು ಅಂದಾಗ ಮಾನವನ ಬದುಕು ಸಾರ್ಥಕವಾಗುತ್ತದೆ . ಶರಣರ ದೃಷ್ಟಿಯಲ್ಲಿ ಮಾತುಗಳು ಜ್ಯೋತಿರ್ಲಿಂಗ ಎಂದರು.
ಮುಂದುವರೆದು ಮಾತನಾಡುತ್ತಾ “ಶರೀರ ಮಾಧ್ಯo ಖಲು ಧಮ೯ಸಾಧನಂ” ಎಲ್ಲ ಸಾಧನೆಗಳಿಗೆ ಈ ಶರೀರವೇ ಮುಖ್ಯ. ಈ ಮಾನವ ಶರೀರ ಭಗವಂತ ನೀಡಿದ ಅದ್ಭುತ ಕಾಣಿಕೆ ಎಂದರು.
ಸಮಾಜ ಸೇವಾಧುರೀಣ ಅಜೀಜ್ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು . ಮುತ್ತಪ್ಪ ಮಾಧವನವರ ಹಾಗೂ ರಾಜಕುಮಾರ್ ಮಾಧವನವರ ಸಂಚಾಲಕರಾಗಿ ಕಾಯ೯ನಿವ೯ಹಿಸಿದರು. ಪ್ರಭು ಬಡಿಗೇರ, ಪರಸಪ್ಪ ಹಿರೇಹೊಳಿ, ಈಶ್ವರಪ್ಪ ಗೋಡಿ, ಬಸವರಾಜ ಚಂದ್ರಗಿರಿ, ಅಚ೯ಕರಾದ ಕೃಷ್ಣಪ್ಪ ಬಡಿಗೇರ, ಬಾಬು ಮಹಾರಾಜರು ಜಯಪ್ಪ ಕಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಖ್ಯಾತ ಸಂಗೀತಗಾರ ಶಿರಗೂರದ ನಾಗಯ್ಯ ಸ್ವಾಮಿ ಹಿರೇಮಠ ಅವರಿಂದ ಸಂಗೀತ ಸೇವೆ ನಡೆಯಿತು. ಹಿಪ್ಪರಗಿಯ ಸಂಗಣ್ಣ ಪೂಜಾರಿ ತಬಲಾ ಸಾಥ್ ನೀಡಿದರು . ಇದೇ ಸಂದರ್ಭದಲ್ಲಿ ತನು ಮನ ಧನ ಸೇವೆ ಮಾಡಿದ ಸಾಧಕರನ್ನು ಸಭೆಯಲ್ಲಿ ಗೌರವಿಸಿದರು. ಮಹಾಮಂಗಲ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು

