ಪ್ರೀತಿ, ವಿಶ್ವಾಸ,ಸ್ನೇಹವನ್ನು ಮಾನವನ ಸಂಪತ್ತು ಎನ್ನಬಹುದಿತ್ತು. ಕಾಲಬದಲಾದಂತೆ ಅದರಲ್ಲಿ ಸ್ವಾರ್ಥ ಅಹಂಕಾರ ಬೆಳೆಯುತ್ತಾ ಅಸುರಿತನ ಮಾನವನಲ್ಲಿ ಮನೆ ಮಾಡಿತು. ಈಗ ಪ್ರೇಮಕ್ಕೂ ಕಾಮಕ್ಕೂ ವ್ಯತ್ಯಾಸ ತಿಳಿಯದೆ ಸಂಸಾರ ನಡೆದಿದೆ. ಇನ್ನು ವಿಶ್ವಾಸದ್ರೋಹ ಬಗೆಯುವವರ ಹಿಂದೆ ನಿಂತು ರಾಜಕೀಯಕ್ಕೆ ಸಹಕಾರ ನೀಡೋ ಜನರು ಹೆಚ್ಚು, ಸ್ನೇಹದಲ್ಲಂತೂ ಶ್ರೀಮಂತ ರೆ ಬೇಕು.
ಕಾರಣ ನಮ್ಮ ಬೌತಿಕ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು ಹೊರಗಿನ ಹಣದಿಂದ ಮಾತ್ರ ಸಾಧ್ಯ. ಇವೆಲ್ಲದರ ಹಿಂದೆ ನಿಂತ ಮೂಲ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಇಂದಿನ ಯುವಪೀಳಿಗೆಗೆ ಜ್ಞಾನದ ಶಿಕ್ಷಣದ ಅಗತ್ಯವಿತ್ತು. ವಿಜ್ಞಾನ ಜಗತ್ತು ವಿದೇಶದ ಕಡೆಗೆ ಮುಖಮಾಡಿಕೊಂಡು ವಿದೇಶಿಗರ ಸ್ನೇಹಹಸ್ತಕ್ಕೆ ಕೈ ಚಾಚಿ ದೇಶವನ್ನು ವಿದೇಶಮಾಡಿ ಸ್ಮಾರ್ಟ್ಸಿ ಟಿ,ಸ್ಮಾರ್ಟ್ ಹಳ್ಳಿ ಮಾಡೋದರಲ್ಲಿಯೇ ರಾಜಕೀಯ ನಡೆಸಿಕೊಂಡು ಒಬ್ಬರ ಕಾಲು ಇನ್ನೊಬ್ಬರು ಎಳೆದು ಬೀಳಿಸಿ ಅಧಿಕಾರ ಪಡೆಯುತ್ತಾ ಹೋಗೋದಕ್ಕೆ ಕಾರಣವೆ ಪ್ರಜೆಗಳ ಸ್ನೇಹ ಸಹಕಾರ.
ಸಹಕಾರವೇ ಇಲ್ಲವಾಗಿದ್ದರೆ? ಮಾಧ್ಯಮವೆ ಇಲ್ಲವಾಗಿದ್ದರೆ? ಮಧ್ಯವರ್ತಿಗಳು ಇಲ್ಲವಾಗಿದ್ದರೆ ಯಾರು ಯಾರನ್ನೂ ಆಳದೆ ಪಾಲಿಗೆ ಬಂದದ್ದು ಪಂಚಾಮೃತವೆಂದರಿತು ಸರಳ ಜೀವನ ನಡೆಸಿಕೊಂಡು ಪರಮಾತ್ಮನಿಗೆ ಶರಣಾಗಿರುತ್ತಿದ್ದರು. ಪರಮಾತ್ಮ ಒಳಗೆ ಹೊರಗೆ ಇದ್ದು ಸಹಾಯ ಮಾಡುತ್ತಿದ್ದರೂ ಅತಿಯಾದ ಆಸೆ,ಆಕಾಂಕ್ಷೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳದ ಮನಸ್ಸಿಗೆ ಪರರಿಂದ ಏನು ಸಿಗುವುದೆನ್ನುವ ಬಗ್ಗೆ ಚಿಂತನೆ ನಡೆಸುತ್ತಾ ಇದ್ದ ಸುಖ ಶಾಂತಿ ಬಿಟ್ಟು ಹೊರಗೆ ನಡೆದ ಜೀವಕ್ಕೆ ಇಂದು ಕೊರೊನ ದೊಡ್ಡ ಸವಾಲು ಹಾಕಿದೆ.
ಪ್ರೀತಿ, ಪ್ರೇಮ, ಸ್ನೇಹ, ವಿಶ್ವಾಸಗಳೆಲ್ಲವೂ ಜೀವ ಹೋಗೋ ಸಮಯದಲ್ಲಿಯೂ ಇದ್ದರೆ ಅದು ನಿಜವಾದ ಶುದ್ದ ಸ್ನೇಹ. ಇದನ್ನು ನಮ್ಮ ಸುತ್ತಮುತ್ತಲಿನ ಜನರಲ್ಲಿ ಮನೆಯವರಲ್ಲಿ ಯಾರು ಕಾಣುತ್ತಿರುವರೋ ಅವರೆ ನಿಜವಾದ ಅದೃಷ್ಟವಂತರು. ಅದಕ್ಕಾಗಿ ಮಕ್ಕಳಿಗೆ ಯೋಗ್ಯ ಸ್ನೇಹಿತರ ಅಗತ್ಯವಿದೆ. ಭೋಗದ ಜೀವನಕ್ಕೆ ಸ್ನೇಹ ಮಾಡದೆ ಯೋಗಿಗಳಜೊತೆಗೆ ಸ್ನೇಹ,ವಿಶ್ವಾಸ ಬೆಳೆಸಿದರೆ ಕೊನೆಯಲ್ಲಿ ಪರಮಾತ್ಮನ ಕಾಣೋ ಯೋಗ ಬಂದರೂ ಬರಬಹುದು.
ಹಿಂದಿನ ಕಾಲದಲ್ಲಿದ್ದ ಶಿಕ್ಷಣ ಇಂದಿಲ್ಲ. ಭೌತಿಕ ವಿಜ್ಞಾನ ಮಕ್ಕಳಿಗೆ ಭೋಗವನ್ನು ತೋರಿಸಿ ರೋಗದ ಕಡೆಗೆ ಎಳೆದಿದೆ. ಹೀಗಾದರೆ ದೇಶದ ತುಂಬಾ ಆಸ್ಪತ್ರೆ ಗಳು ರೋಗಿಗಳು ವೈದ್ಯರ ಅಗತ್ಯ ಹೆಚ್ಚುತ್ತದೆ. ಇವರುಗಳ ಜೀವನ ನಡೆದಿರೋದೆ ರೋಗಿಗಳ ಸೇವೆ ಮಾಡೋದರಲ್ಲಿ. ಸೇವೆಯನ್ನು ಉಚಿತವಾಗಿ ಮಾಡೋ ಸ್ನೇಹಿತರಂತೂ ಸಿಗೋದು ಕಷ್ಟ.
ಹೀಗಾಗಿ ರೋಗವೆ ಬರದಂತೆ ಜೀವನ ನಡೆಸಲು ಕಲಿಸೋ ಯೋಗಿಗಳ ಸ್ನೇಹ ಬೆಳೆಸಿದರೆ ಆರೋಗ್ಯವೂ ಉತ್ತಮ ಜೀವನವೂ ಸಾರ್ಥಕ. ಆದರೆ ಈಗ ಕಲಿಗಾಲ ಇಲ್ಲಿ ಯಾವುದೇ ಯೋಗ ಕೂಡಿಬರಲು ಒಂದಾಗಲೇ ಬೇಕು. ಮನಸ್ಸು ಮತ್ತು ಆತ್ಮದ ಸೇರುವಿಕೆಯೆ ಆಧ್ಯಾತ್ಮ. ಆಧ್ಯಾತ್ಮ ವನ್ನು ಹೊರಗಿನಿಂದ ಒಳಗೆಳೆದುಕೊಂಡು ಒಳಗಿನ ಚಕ್ಷುವಿನಿಂದ ನೋಡಿಕೊಂಡು ಹಾಗೆಯೇ ಹೃದಯದವರೆಗೆ ಹರಿಸಿಕೊಂಡು ಮನುಕುಲದ ಏಳಿಗೆಗೆ ಈಗಿನ ಪರಿಸ್ಥಿತಿಗೆ ಏನು ಅಗತ್ಯವಿದೆ ಎನ್ನುವ ಚಿಂತನೆ ನಡೆಸಿ, ತಮ್ಮ ತಮ್ಮ ಮೂಲ ಧರ್ಮ ಕರ್ಮದ ಕಡೆಗೆ ಮೂಲಧಾರ ಚಕ್ರವನ್ನು ಸರಿಯಾಗಿ ತಿಳಿದರೆ ನಂತರ ನಿಧಾನವಾಗಿ ಮೇಲಿನ ಚಕ್ರಗಳ ಶುದ್ದಿಕಾರ್ಯ ವಾಗುತ್ತದೆ.
ಮೇಲಿನ ಸಹಸ್ರಾರ ಚಕ್ರಕ್ಕೆ ನೇರವಾಗಿ ಹೋಗಲು ನಾವೇನು ಮಹಾದೇವತೆಗಳಲ್ಲ, ತಪಸ್ವಿಗಳಲ್ಲ ಸಾದು ಸಂತರಿಗೇ ಸಾಧ್ಯವಾಗದ್ದು ಈಗಿನ ಅಲ್ಪ ಜ್ಞಾನ ಪಡೆದ ಮಾನವನಿಗೆ ಕಷ್ಟವಿದೆ.ಹೀಗಾಗಿ ಹಿಂದಿನ ಕಥೆ ಪುರಾಣ ಇತಿಹಾಸ ಓದಬಹುದು. ನಮ್ಮ ಇಂದಿನ ಸ್ಥಿತಿಗೆ ಕಾರಣ ತಿಳಿದು ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಜ್ಞಾನ ಬೆಳೆಸಿಕೊಂಡರೆ ನಮ್ಮೊಳಗೇ ಅಡಗಿರುವ ಸ್ನೇಹಿತ ನಮಗೆ ಸದಾಕಾಲ ಜೊತಗಿರಬಹುದು. ಭೌತಿಕದ ಸ್ನೇಹ ಶುದ್ದವಾಗಿರಬಹುದು.
ಪರಮಾತ್ಮನ ಸ್ನೇಹಕ್ಕೆ ಯೋಗ ಬರಬೇಕು. ಯೋಗ್ಯ ಶಿಕ್ಷಣ ಬೇಕು. ಯೋಗ್ಯ ಜೀವನ ಇರಬೇಕು. ಯೋಗಾಯೋಗದಿಂದ ಆರೋಗ್ಯವೃದ್ದಿ ಸಾಧ್ಯ. ಕೊರೊನ ವನ್ನು ತಡೆಯಲು ರಾಜಕೀಯ ಬೇಡ.ರಾಜಯೋಗ ಬೇಕಿದೆ. ನಮ್ಮ ಆರೋಗ್ಯ ಸರ್ಕಾರದ ಕೈಯಲ್ಲಿ ಇಲ್ಲ. ನಮ್ಮ ಆಯಸ್ಸು ನಮಗೆ ತಿಳಿದಿಲ್ಲ. ಇದ್ದಾಗಲೆ ಉತ್ತಮ ಸ್ನೇಹ, ಪ್ರೇಮ, ವಿಶ್ವಾಸ ದಿಂದ ಜೀವಿಸುವುದಕ್ಕೂ ಯೋಗವಿರಬೇಕು. ಯೋಗ ಕೂಡಿಬರಲು ಆಂತರಿಕ ಸ್ವಚ್ಚತೆ ಕಡೆಗೆ ನಡೆದು ಪರಮಾತ್ಮನ ದಾಸರಾದರು. ಈಗ ಪರಕೀಯರ ಭೋಗದೆಡೆಗೆ ನಡೆದು ರೋಗ ಹೆಚ್ಚಾಗಿರೋದನ್ನು ಪ್ರಗತಿ ಎನ್ನಬಹುದೆ? ಆತ್ಮನಿರ್ಭರ ಭಾರತಕ್ಕೆ ಆಧ್ಯಾತ್ಮದ ಯೋಗ ಶಿಕ್ಷಣ ಅಗತ್ಯವಿದೆ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು