ಬೀದರ – ನಗರದ ಎಸ್ ಬಿಐ ಮುಂದೆ ಸಿಎಂಸಿ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ ಹಾಡಹಗಲೇ ೯೩ ಲಕ್ಷ ದರೋಡೆ ಮಾಡಿದ ದುಷ್ಕರ್ಮಿಗಳನ್ನು ಬೀದರ ಪೊಲೀಸರು ಹನ್ನೆರಡು ತಾಸಿನೊಳಗೇ ಬೇಟೆಯಾಡಿ ಹಿಡಿದಿದ್ದಾರೆ.
ದಾಳಿಯಲ್ಲಿ ಒಬ್ಬ ದರೋಡೆಕೋರನಿಗೆ ಕಾಲಿಗೆ ಗುಂಡು ತಗುಲಿದ್ದು ಇನ್ನೊಬ್ಬ ಪರಾರಿಯಾಗಿದ್ದಾನೆ. ಲೂಟಿಯಾಗಿದ್ದ ಎಲ್ಲಾ ೯೩ ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಬೀದರ ಜಿಲ್ಲಾ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.
ಕೆಲವೇ ಗಂಟೆಗಳಲ್ಲಿ ದರೋಡೆಕೋರರನ್ನು ಹಿಡಿದ ಬೀದರ ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಸ್ ಪಿ ಪ್ರದೀಪ ಗುಂಟಿಯವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಹೈದರಾಬಾದ್ ನ ಅಫಜಲ್ ಗಂಜ್ ಪ್ರದೇಶದಲ್ಲಿ ದರೋಡೆಕೋರರನ್ನು ಪೊಲೀಸರು ಪತ್ತೆಹಚ್ಚಿದರು. ಪರಸ್ಪರ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿಬಿದ್ದಿದ್ದು ಇನ್ನೊಬ್ಬ ಪರಾರಿಯಾಗಿದ್ದಾನೆ.
ಘಟನೆಯ ಹಿನ್ನೆಲೆ ; ಹಣಕ್ಕಾಗಿ ಹೆಣ ಹಾಕಿದ ಹಂತಕರು. ಬೀದರ್ ನಗರದಲ್ಲಿ ಗುರುವಾರ ಬೆಳಿಗ್ಗೆ ಹಣಕ್ಕಾಗಿ ನಡು ಬೀದಿಯಲ್ಲೆ ಶೂಟೌಟ್ ನಡೆದಿದ್ದು ದುಷ್ಕರ್ಮಿಗಳು ಹಣಕ್ಕಾಗಿ ೬ ಸುತ್ತು ಗುಂಡು ಹಾರಿಸಿ ಇಬ್ಬರು ಸಿಎಂಎಸ್ ಸಿಬ್ಬಂದಿಗಳ ಮೇಲೆ ಅಟ್ಯಾಕ್ ಮಾಡಿದ್ದರು. ಸ್ಥಳದಲ್ಲೆ ಒಬ್ಬ ವ್ಯಕ್ತಿಯ ಸಾವು ಸಂಭವಿಸಿ ಮತ್ತೊಬ್ಬ ಸಿಬ್ಬಂದಿಯ ಸ್ಥಿತಿ ಚಿಂತಾಜನಕವಾಗಿದೆಯೆನ್ನಲಾಗಿದೆ.
ಹಣ ತುಂಬಿದ ಬಾಕ್ಸ್ ಬೈಕ್ ಮೇಲೆ ಇಡಲು ಹೆಣಗಾಡುತ್ತ, ಒಂದು ಕೈಯಲ್ಲಿ ಪಿಸ್ತೂಲ್ ಹಿಡಿದು ಪರಾರಿಯಾಗ್ತಿರುವ ಈ ಇಬ್ಬರು ದರೋಡೆಕೊರರು. ಮತ್ತೊಂದ ಕಡೆ ದರೋಡೆಕೋರರ ಬುಲೆಟ್ ಗೆ ಬಲಿಯಾಗಿ ರಸ್ತೆ ಬದಿಯಲ್ಲಿ ಹೆಣವಾಗಿ ಬಿದ್ದ ಸಿಎಂಎಸ್ ಸಂಸ್ಥೆಯ ಸಿಬ್ಬಂದಿ ಗಿರಿ ವೆಂಕಟೇಶ ಸಾವು .. ರಕ್ತದ ಮಡುವಿನಲ್ಲಿ ಸಾವು ಬದುಕಿನ ಮದ್ಯೆ ಒದ್ದಾಡ್ತಿರುವ ಮತ್ತೊಬ್ಬ ಸಿಬ್ಬಂಧಿ ಶಿವು. ಈ ಘಟನೆಯನ್ನು ಮೋಬೈಲ್ ನಲ್ಲಿ ಮೂಕ ಪ್ರೇಕ್ಷಕರಾಗಿ ಚಿತ್ರೀಕರಣ ಮಾಡುತ್ತಿರುವ ಸಾರ್ವಜನಿಕರು.
ಬೆಳಿಗ್ಗೆ 10 ಗಂಟೆ ಸುಮಾರಿಗೆ ಎಂದಿನಂತೆ ಸಿಎಂಎಸ್ ಸಂಸ್ಥೆಯ ವ್ಯಾನ ಹಣ ಲೋಡ ಮಾಡಿಕೊಂಡು ಕ್ಯಾಶಿಯರ್ ಗಳಾದ ಗಿರಿ ವೆಂಕಟೇಶ್, ಶಿವಕುಮಾರ್, ಮತ್ತು ಡ್ರಾಯವರ್ ರಾಜು ಎಂಬಾತರು ಎಟಿಎಂ ನಲ್ಲಿ ಹಣ ಹಾಕಲು ಜಿಲ್ಲಾಧಿಕಾರಿ ಕಚೇರಿ ಬದಿಯ ಎಸ್ ಬಿಐ ಬ್ಯಾಂಕ್ ಎಟಿಎಂ ಗೆ ಹಣ ಹಾಕಲು ವ್ಯಾನ್ ನಿಲ್ಲಿಸಿದಾರೆ. ಈ ವೇಳೆಯಲ್ಲಿ ಸ್ಕೆಚ್ ಹಾಕಿ ಕೂತ ಇಬ್ಬರು ಖದೀಮರು ಬೈಕ್ ಮೇಲೆ ಬಂದು ಒಮ್ಮಲೆ ಖಾರದ ಪುಡಿ ಹಾಕಿದ್ದಾರೆ. ಇದರಿಂದ ವಿಚಲಿತರಾದ ಸಿಬ್ಬಂದಿಗಳ ಮೇಲೆ ಮನ ಬಂದಂತೆ ಪಿಸ್ತೂಲ್ ತೆಗೆದು ಫೈರಿಂಗ್ ಮಾಡಿದ್ದಾರೆ.ಎಂಟು ಸುತ್ತು ಫೈರಿಂಗ್ ಮಾಡಿದರು ಈ ಘಟನೆಯಲ್ಲಿ ಸ್ಥಳದಲ್ಲೆ ಗಿರಿ ವೇಂಕಟೇಶ ಸಾವನಪ್ಪಿದ್ದಾರೆ.
ಶಿವಕುಮಾರ್ ಎಂಬಾತರ ಎದೇ ಭಾಗದಲ್ಲಿ ಗುಂಡು ತಗುಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ.
ಇಷ್ಟೇಲ್ಲಾ ನಡೆದರೂ ಖದೀಮರು ಹಣದ ಕಂತೆ ತುಂಬಿದ ಬಾಕ್ಸ್ ಬೈಕ್ ಮೇಲೆ ಇಟ್ಟ ಕೊಂಡು ಪರಾರಿಯಾಗಿದ್ದಾರೆ.
ಕುಟುಂಬಸ್ಥರು ಆಸ್ಪತ್ರೆಯಲ್ಲಿ ದಿಢೀರಣೆ ಪ್ರತಿಭಟನೆ ಮಾಡಿದರು.. ನಮ್ಮ ತಮ್ಮನ ಸಾವಿಗೆ ನಾಯ್ಯ ಸಿಗಬೇಕು ಎಂದು.. ಜಿಲ್ಲಾ ಆಡಳಿತ ಮತ್ತು ಸಿಎಮ್ಎಸ್ ಎಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಶಕ್ತಿ ಬಾವಿಕಟ್ಟಿ- ಮೃತ ಸಿಬ್ಬಂದಿಯ ಸಂಬಂದಿ
ಈ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿದ್ದು ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ನಾಕಾ ಬಂದಿ ಹಾಕಿದ್ದಾರೆ. ಒಂದೊಂದೂ ವಾಹನದ ತಪಾಸಣೆ ನಡೆಸಿದ್ದಾರೆ. ಆರೋಪಿಗಳ ಹುಡುಕಾಟಕ್ಕೆ ಶೋಧ ನಡೆಸಿದ್ದಾರೆ. ಇತ್ತ ಘಟನೆಯಲ್ಲಿ ಮೃತಪಟ್ಟ ಗಿರಿ ವೆಂಕಟೇಶನ ಕುಟುಂಬಸ್ಥರು ಕಣ್ಣಿರು ಹಾಕುತ್ತ ಕಂಬಿನಿ ಮಿಡಿದಿದ್ದಾರೆ.
ಒಟ್ಟನಲ್ಲಿ ಬಡಪಾಯಿ ಸಿಬ್ಬಂದಿಗಳ ಕೊಲೆ ಮಾಡಿ ಹಣದ ಕಂತೆ ಎತ್ತಾಕಿಕೊಂಡು ಹೊದ ಖದೀಮರು ಅಂದರ್ ಆಗಬೇಕು, ನಡು ಬೀದಿಯಲ್ಲಿ ರಕ್ತ ಚಿಲುಮೆ ಹರಿಸಿದವರನ್ನು ಗಲ್ಲಿಗೇರಿಸಬೇಕು ಸುಮ್ಮನೆ ಬಿಟ್ಟರೆ ಸಮಾಜ ದಾರಿ ತಪ್ಪುತ್ತೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ