ಶ್ರೀಮದ್ಭಗವದ್ಗೀತಾ ಜಯಂತಿ ಪ್ರಯುಕ್ತ ಪೂರ್ಣೋದಯ ಟ್ರಸ್ಟ್ ವತಿಯಿಂದ ️ಭಗವದ್ಗೀತಾ ಜ್ಞಾನ ಸಪ್ತಾಹ

Must Read

ಪೂರ್ಣೋದಯ ಟ್ರಸ್ಟ್ ಹಿರೇಬಾಗೆವಾಡಿ ಶಾಖೆ ವತಿಯಿಂದ ‘ಶ್ರೀಮದ್ಭಗವದ್ಗೀತಾ ಜಯಂತಿ’ ಪ್ರಯುಕ್ತವಾಗಿ ‘ಭಗವದ್ಗೀತಾ ಜ್ಞಾನ ಸಪ್ತಾಹ’ವನ್ನು ಇದೇ ಡಿಸೆಂಬರ್ 8ರಿಂದ 14ರವರೆಗೆ ಹಿರೇಬಾಗೇವಾಡಿಯ ಜಾಲಿ ಕರೆಮ್ಮ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಕಟ್ಟಿಯ ಶ್ರೀ ಸಿದ್ದೇಶ್ವರ ದೇವರು ವಹಿಸಲಿದ್ದು ಜಾಲಿ ಕರೆಮ್ಮ ದೇವಸ್ಥಾನದ ಶ್ರೀ ಉಳವಪ್ಪ ಅಜ್ಜನವರ ಸಹಕಾರದೊಂದಿಗೆ ಏಳುದಿನಗಳವರೆಗೆ ಗೀತಾ ಪಾರಾಯಣ, ಗೀತಾಸಾರ, ಸಾಮೂಹಿಕ ಪೂಜೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಪ್ರಯುಕ್ತ ದಿನಾಲು ಉಪಾಹಾರ ಮತ್ತು ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತಲಿನ ಸದ್ಭಕ್ತರು ಈ ಸತ್ಕಾರ್ಯದಲ್ಲಿ ಭಾಗವಹಿಸಿ ಪುನೀತರಾಗುವುದರ ಜೊತೆಗೆ ಭಗವದ್ಗೀತೆಯ ಸಾರವನ್ನು ತಿಳಿಯುವ ಒಳ್ಳೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಟ್ರಸ್ಟ್ ನ ಕಾರ್ಯದರ್ಶಿ ಮಲ್ಲಪ್ಪ ಸಂಕದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9880741401 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

Latest News

ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ

ಸಿಂದಗಿ; ಪ್ರತಿಯೊಂದು ಸಮುದಾಯವನ್ನು ಗೌರವಿಸಿ ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಜಯಂತಿಗಳನ್ನು ಆಚರಿಸುವ ಸತ್ಕಾರ್ಯಗಳನ್ನು ನಡೆಸಿದೆ. ಮಹಾನ್ ವ್ಯಕ್ತಿಗಳ...

More Articles Like This

error: Content is protected !!
Join WhatsApp Group