ಸಿಂದಗಿ; ಸುಮಾರು ೪೦ ವರ್ಷದ ರಾಜಕಾರಣದಲ್ಲಿ ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡಿದರು ಸಹ ಪಟ್ಟಣದ ಜನತೆ ಮನಗೂಳಿ ಮನೆತನಕ್ಕೆ ಕೈಬಿಟ್ಟಿಲ್ಲ ಅದಕ್ಕೆ ಸರಕಾರದಿಂದ ಹಂತ ಹಂತವಾಗಿ ಅನುದಾನ ತಂದು ಮಾದರಿ ಪಟ್ಟಣವನ್ನಾಗಿ ಮಾಡುವ ಪಣ ತೊಟ್ಟಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಬಸ್ ಡಿಪೋ ಹಿಂದುಗಡೆಯಲ್ಲಿರುವ ಆಶ್ರಯ ಕಾಲೋನಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ೨೦೨೪-೨೫ನೇ ಸಾಲಿನ ಕಾಲೋನಿ ಅಭಿವೃದ್ಧಿ ಯೋಜನೆ/ ಪ್ರಗತಿ ಕಾಲೋನಿ ಯೋಜನೆಯಡಿ ರೂ ೫೦ ಲಕ್ಷ ವೆಚ್ಚದ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸರಕಾರದಲ್ಲಿ ೫ ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ಓಟು ನೀಡಿದವರಿಗೆ ಮಾತ್ರ ನೀಡುತ್ತಿಲ್ಲ ಯಾವುದೇ ಪಕ್ಷಕ್ಕೆ ಓಟು ನೀಡಿದರು ಕೂಡಾ ಅವರೆಲ್ಲರಿಗೂ ಡಾ. ಅಂಬೇಡ್ಕರರವರ ಸಾಮಾಜಿಕ ನ್ಯಾಯದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ೫ ಗ್ಯಾರೆಂಟಿ ಯೋಜನೆಗಳನ್ನು ೫೮೬೦೦ ಕೋಟಿ ಹಣ ಮಿಸಲಿಟ್ಟು ಸಮಪಾಲು ನೀಡಲಾಗುತ್ತಿದೆ ಎಂದರು.
ಆದಿಶೇಷ ಸಂಸ್ಥಾನ ಹಿರೇಮಠದ ರಾಜಯೋಗಿ ನಾಗರತ್ನ ವೀರಾಜೇಂದ್ರ ಮಹಾಸ್ವಾಮಿಗಳು ಸಾನ್ನಿದ್ಯ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಮಾಜಿ ಅದ್ಯಕ್ಷರಾದ ಭಾಷಾಸಾಬ ತಾಂಬೋಳಿ, ಹಣಮಂತ ಸುಣಗಾರ, ಸ್ಥಾಯಿ ಸಮಿತಿ ಅದ್ಯಕ್ಷ ಶ್ರೀಶೈಲ ಬೀರಗೊಂಡ, ಕೆಆರ್.ಡಿಐ ಎಇಇ ರಾಜಶೇಖರ ಜೋತಗೊಂಡ, ಎಇ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪುರಸಭೆ ಜೆಇ ದಯಾನಂದ ಇವಣಿ, ರಜತ ತಾಂಬೆ, ಶರಣಮ್ಮ ನಾಯಕ, ಮಮತಾಜ ಖೇಡ ಸೇರಿದಂತೆ ಅನೇಕರಿದ್ದರು.
ಸದಸ್ಯ ಬಸವರಾಜ ಯರನಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮತನಾಡಿದರು.

