ಮೂಡಲಗಿ – ಬ್ಯಾಂಕ್ ಆಫ್ ಕಲ್ಕತ್ತಾ _ಮದ್ರಾಸ, ಮುಂಬೈ ಬ್ಯಾಂಕುಗಳು ವಿಲೀನವಾಗಿ 1955 ಇಂಪಿರಿಯಲ್ ಬ್ಯಾಂಕ್ ಆಯಿತು ನಂತರ ಎಸ್ ಬಿ ಆಯ್ ಆಯಿತು. ಸರಕಾರಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವ ಒಬ್ಬ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸಲು ಎಸ್ ಬಿ ಐ ಸ್ಥಾಪನೆಯಾಗಿ ಅಂದಿನಿಂದಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಬಂದಿದೆ ಎಂದು ಮೂಡಲಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಪ್ರಬಂಧಕ ಶ್ರೀನಿವಾಸ ಎಸ್ ದೇಶಪಾಂಡೆ ಹೇಳಿದರು.
ಜುಲೈ 1 ರಂದು ಎಸ್ ಬಿ ಐ ಸ್ಥಾಪನಾ ದಿವಸದ ಅಂಗವಾಗಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ಇಂಟೆಗ್ರೇಟೆಡ್ ಸೈನ್ಸ್, ಕಾಮರ್ಸ್ ಕೋರ್ಸ್ ಆರಂಭಿಸಿರುವ ಪ್ರೊ. ಸುರೇಶ ಶಿವಾಪೂರ ಮಾತನಾಡಿ, ವಿದ್ಯೆ ಕಲಿಯಲು ಇಂದಿನ ಯುವಕರು ಮೂಡಬಿದ್ರಿ, ಕಾರ್ಕಳದಂಥ ದೂರದ ಪ್ರದೇಶಕ್ಕೆ ಹೋಗುತ್ತಿದ್ದಾರೆ ಇದನ್ನು ನಿವಾರಿಸಿ ನಮ್ಮ ಭಾಗದ ವಿದ್ಯಾರ್ಥಿಗಳು ನಮ್ಮಲ್ಲಿಯೇ ಕಲಿಯಬೇಕೆಂಬ ಉದ್ದೇಶದಿಂದ ನೀಟ್ ಹಾಗೂ ಸಿಇಟಿ ಕೋಚಿಂಗ್ ಆರಂಭಿಸಿದ್ದೇವೆ. ಎಸ್ ಬಿಆಯ್ ವತಿಯಿಂದ ನಮಗೆ ಸಾಕಷ್ಟು ಸಹಕಾರ ದೊರೆತಿದೆ ಎಂದರು.
ಪತ್ರಕರ್ತ ಉಮೇಶ ಬೆಳಕೂಡ ಮಾತನಾಡಿ, ಬಡವರ, ಮಧ್ಯಮ ವರ್ಗದವರ ಹಣಕಾಸು ಬೇಡಿಕೆಗಳನ್ನು ಎಸ್ ಬಿ ಆಯ್ ಬ್ಯಾಂಕು ಈಡೇರಿಸಲಿ ಎಂದರು.
ಪ್ರೊ. ಸುರೇಶ ಅವರನ್ನು ಬ್ಯಾಂಕಿನ ವತಿಯಿಂದ ಸತ್ಕರಿಸಲಾಯಿತು.
ಸಂತೋಷ ಅವರು ಸ್ವಾಗತಿಸಿದರು, ಸಿಬ್ಬಂದಿ ಹಣಮಂತ ವ್ಯಾಪಾರಿ ಹಾಗೂ ಉದಯ ಕಾಂಬಳೆ ಉಪಸ್ಥಿತರಿದ್ದರು.