Homeಸುದ್ದಿಗಳುLions Club Mudalagi: ಮೂಡಲಗಿ ಲಯನ್ಸ್ ಅಧ್ಯಕ್ಷರಾಗಿ ಲೋಕನ್ನವರ ಆಯ್ಕೆ

Lions Club Mudalagi: ಮೂಡಲಗಿ ಲಯನ್ಸ್ ಅಧ್ಯಕ್ಷರಾಗಿ ಲೋಕನ್ನವರ ಆಯ್ಕೆ

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2023-24ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಶೈಲ್ ಪಿ. ಲೋಕನ್ನವರ, ಕಾರ್ಯದರ್ಶಿಯಾಗಿ ಸುಪ್ರೀತ ಎಸ್. ಸೋನವಾಲಕರ ಹಾಗೂ ಖಜಾಂಚಿಯಾಗಿ ಕೃಷ್ಣಾ ಎಲ್. ಕೆಂಪಸತ್ತಿ ಅವರು ಆಯ್ಕೆಯಾಗಿರುವರು.

ಪದಗ್ರಹಣ: 2023-24ನೇ ಸಾಲಿನ ಲಯನ್ ಕ್ಲಬ್ ಮೂಡಲಗಿ ಪರಿವಾರದ ಪದಾಧಿಕಾರಿಗಳ ಪದಗ್ರಹಣವು ಜು.2ರಂದು ಸಂಜೆ 5ಕ್ಕೆ ಎಂಇಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಲಿದೆ. 

ಪದಾಧಿಕಾರಿಗಳ ಪದಗ್ರಹಣ ಅಧಿಕಾರಿಯಾಗಿ ಜಮಖಂಡಿಯ ಡಾ. ರಂಗಣ್ಣ ಎನ್. ಸೋನವಾಲಕರ ಭಾಗವಹಿಸುವರು. ಮುಖ್ಯ ಅತಿಥಿಯಾಗಿ ಕೆಸರಗೊಪ್ಪದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್.ಎಂ. ಶೇಖ್ ಭಾಗವಹಿಸುವರು. 

ಸಮಾರಂಭದ ಪೂರ್ವದಲ್ಲಿ ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಲಾಗುವುದು ಎಂದು ಪ್ರಸಕ್ತ ನಿಕಟಪೂರ್ವ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಕಾರ್ಯದರ್ಶಿ ಸಂಗಮೇಶ ಕೌಜಲಗಿ ತಿಳಿಸಿದ್ದಾರೆ.

RELATED ARTICLES

Most Popular

close
error: Content is protected !!
Join WhatsApp Group