ಕೇಂದ್ರ ನೌಕರರ ಸಮಾನ ವೇತನಕ್ಕೆ ಆಗ್ರಹಿಸಿ ರಾಜ್ಯದ ನೌಕರರ ಮನವಿ

Must Read

ಸಿಂದಗಿ: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ಹಾಗೂ ಭತ್ಯೆಗಳ ಸೌಲಭ್ಯಗಳನ್ನು ದೊರಕಿಸಿಕೊಡಲು ಹೊಸ ವೇತನ ಆಯೋಗ ರಚಿಸಲು ಆಗ್ರಹಿಸಿ ಶಾಸಕ ರಮೇಶ ಭೂನಸೂರ ಅವರಿಗೆ ಸಿಂದಗಿ ತಾಲೂಕು ಸರ್ಕಾರಿ ನೌಕರರ ಸಂಘದ ಎಲ್ಲ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಅಧ್ಯಕ್ಷ ಅಶೋಕ.ಸಿ.ತೆಲ್ಲೂರ ಮಾತನಾಡಿ, ರಾಜ್ಯದ ಬಹುತೇಕ ನೌಕರರ ಪ್ರಮುಖ ಬೇಡಿಕೆಯಾದ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಪಡಿಸುವುದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹಾಗೂ ಪ.ಪೂ ಕಾಲೇಜುಗಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಆರೋಗ್ಯ ಇಲಾಖೆಯ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಎಲ್ಲ ಇಲಾಖೆಗಳ ವಿವಿಧ ಬೇಡಿಕೆಗಳನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡರು.

ಸನ್ಮಾನ ಮತ್ತು ಮನವಿ ಕಾರ್ಯಕ್ರಮದಲ್ಲಿ ಆಲಮೇಲ ಅಧ್ಯಕ್ಷ ರವಿ ಬಿರಾದಾರ, ದೇವರಹಿಪ್ಪರಗಿ ಅಧ್ಯಕ್ಷ ಎಮ್.ಜಿ.ಯಂಕಂಚಿ, ರಾಜ್ಯ ಪರಿಷತ್ ಸದಸ್ಯ ಎಫ.ಬಿ.ಅರಳಿಮಟ್ಟಿ, ಖಜಾಂಚಿ ಶಿವರಾಜ ಚೌಧರಿ, ಗೌರವಾಧ್ಯಕ್ಷ ಗಿರೀಶ ಗತಾಟೆ, ಅರಣ್ಯ ಇಲಾಖೆಯ ಸೋಮಣ್ಣ ಬಬಲೇಶ್ವರ, ಉಪಾಧ್ಯಕ್ಷ ಶ್ರೀಮತಿ ಎಸ್.ಎಮ್.ಚಿಗರಿ, ತಾಲೂಕು ಪಂ. ಅಮಿತ ಗತಾಟೆ, ಸಹ ಕಾರ್ಯದರ್ಶಿ ಎಮ್.ಎಚ್.ಮರ್ತೂರ, ಕ್ರೀಡಾ ಕಾರ್ಯದರ್ಶಿ ಪಂಡಿತ್ ವಾಸೇನ್, ಸಿದ್ದಮ್ಮ ಜಾನಕಿ, ರಫೀಕ ಬಾಣಾದಾರ, ಸೋಮು ಮಕಣಾಪೂರ, ಚೇತನ ಲೋಣಿ, ಬಿ.ಜಿ.ಗುಬ್ಬಾವಾಡ, ರಾಜು ನರಗೋದಿ, ಚೌಡಕಿ ಸರ್, ಸುರೇಶ ಬಬಲೇಶ್ವರ, ನಾಗರಾಜ, ಮೋತಿಬಾಯಿ, ಮುಜಾವರ, ಮನಗೂಳಿ ಮೇಡಂ, ಮತ್ತು ತಾಲೂಕಿನ ಎಲ್ಲ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಇದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group