ಬೆಳಗಾವಿಯಲ್ಲಿ ಮಾರ್ಚ್ ತಿಂಗಳಿನಲ್ಲಿ ರಾಜ್ಯಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ

0
688

ಬೆಳಗಾವಿ – ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಡಿಯಲ್ಲಿ ಅಖಿಲ ಭಾರತ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವು ಮಾರ್ಚ್ ತಿಂಗಳು 2022 ರಲ್ಲಿ ಕುಂದಾನಗರಿ ಕಿತ್ತೂರು ಚನ್ನಮ್ಮನ ಗಂಡುಮೆಟ್ಟಿನ ನಾಡು, ಕರುನಾಡಿನ ಎರಡನೇ ರಾಜಧಾನಿ ,ಕನ್ನಡನಾಡಿಗೆ ಕಳಶಪ್ರಾಯವಾಗಿರುವ ಬೆಳಗಾವಿಯಲ್ಲಿ ಮೂರು ದಿನದ ಸಮ್ಮೇಳನ ಹಮ್ಮಿಕೊಳ್ಳಲು ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮನೋಹರ ನಾಯಕ ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರಾದ ಡಾ//ಅನ್ನಪೂರ್ಣ ಹಿರೇಮಠ ಮತ್ತು ಪರಿಷತ್ತಿನ ರಾಜ್ಯ ,ಜಿಲ್ಲೆ ಮತ್ತು ತಾಲೂಕಿನ ಎಲ್ಲಾ ಪದಾಧಿಕಾರಿಗಳು ಸೇರಿ ನಿರ್ಧರಿಸಲಾಗಿದೆ.

ಸಮ್ಮೇಳನದ ಪೂರ್ವಭಾವಿಯಾಗಿ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಸಮಿತಿಗಳ ರಚನೆ ಮಾಡುವುದು ,ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಮಾಡುವುದು, ರಾಜ್ಯಮಟ್ಟದ ಕವಿಗೋಷ್ಠಿಗೆ ರಾಜ್ಯದ ಪ್ರತಿ ಜಿಲ್ಲೆಗಳಿಂದ ಕವಿಗಳ ಕವನಗಳ ಆಯ್ಕೆ ಮಾಡುವುದು, ಕಲಾತಂಡಗಳ ಆಯ್ಕೆ, ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗೆ ಸಾಧಕರ ಆಯ್ಕೆ ಮಾಡುವುದು ,ಕನ್ನಡ ನಾಡು-ನುಡಿಯ ಬಗ್ಗೆ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡ ಭಾಷೆಯನ್ನು ಗಟ್ಟಿಯಾಗಿಸುವ ಕುರಿತು, ಉಳಿಸಿ-ಬೆಳೆಸುವ ಕುರಿತು ನಾಡಿನ ಚಿಂತಕರಿಂದ ಉಪನ್ಯಾಸಗಳು, ಪ್ರತಿಯೊಂದು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳ ಆಯ್ಕೆ ಮಾಡುವುದು.

ಒಟ್ಟಿನಲ್ಲಿ ಸಮ್ಮೇಳನಕ್ಕೆ ಬೇಕಾಗುವ ಅಗತ್ಯ ಸಿದ್ಧತೆಗಾಗಿ ಕಾರ್ಯಕಲಾಪಗಳ ಕುರಿತು ಚರ್ಚಿಸುವುದು ,ಇಷ್ಟೆಲ್ಲಾ ವಿಷಯಗಳನ್ನು ಚರ್ಚಿಸಲು ಪೂರ್ವಭಾವಿ ಸಭೆಗಳನ್ನು ಜನವರಿ ಎರಡನೇ ವಾರದಲ್ಲಿ ಹಮ್ಮಿಕೊಳ್ಳಲಿದೆ. ರಾಜ್ಯ ಘಟಕದ ಸಂಸ್ಥಾಪನಾ ಅಧ್ಯಕ್ಷರಾದ ಮನೋಹರ ನಾಯಕ, ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷರಾದ ಅನ್ನಪೂರ್ಣ ಹಿರೇಮಠ, ಮತ್ತು ಎಲ್ಲಾ ಪದಾಧಿಕಾರಿಗಳು, ಸರ್ವ ತಾಲೂಕುಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಸೇರಿ ಕನ್ನಡ ಸಾಹಿತ್ಯ ಭವನ ಬೆಳಗಾವಿಯಲ್ಲಿ ಸಭೆ ಹಮ್ಮಿಕೊಳ್ಳಲು ತೀರ್ಮಾನಿಸಿದೆ ಎಂದು ರಾಜ್ಯ ಸಂಸ್ಥಾಪನಾ ಅಧ್ಯಕ್ಷರು ಮನೋಹರ ನಾಯಕ ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷರಾದ ಅನ್ನಪೂರ್ಣ ಹಿರೇಮಠ ಅವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.