ಕುಳಲಿಯಲ್ಲಿ ರಾಜ್ಯಮಟ್ಟದ ಸಂಗೀತೋತ್ಸವ

Must Read

ಸಾಧಕ ಕಲಾವಿದರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ 

ಮುಧೋಳ – ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ರಾಜ್ಯಮಟ್ಟದ ಜನಪದ ಸಂಗೀತೋತ್ಸವವನ್ನು ನಡೆಸಲು ಶ್ರೀಮಠದಲ್ಲಿ ನಡೆದ ಹಿರಿಯರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾಮದ ಗಣ್ಯರಾದ ನಾಗಪ್ಪ ಐಹೊಳೆ ಅವರು ಮಾತನಾಡಿ 2026 ಜನವರಿ ದಿ. 22 ರಿಂದ 24 ರ ವರೆಗೆ ಸಾಧು ಚಕ್ರವರ್ತಿ ಶಿವಾನಂದ ಭಾರತಿ ಶ್ರೀಗಳ ಸಾನ್ನಿಧ್ಯದಲ್ಲಿ 20 ನೆಯ ಅಖಿಲ ಭಾರತ ವೇದಾಂತ ಪರಿಷತ್ತನ್ನು ವಿಜೃಂಭಣೆಯಿಂದ ನಡೆಸುವದಾಗಿ ಹೇಳಿದ ಅವರು ಪೂರ್ವಭಾವಿಯಾಗಿ ಏಳು ದಿನಗಳ ಕಾಲ ಜಾತ್ಯತೀತ ಜಗದ್ಗುರು ಶ್ರೀ ಸಿದ್ಧಾರೂಢರ ಪುರಾಣವನ್ನು ನಡೆಸಲಾಗುವುದು ಎಂದು ಹೇಳಿದರು.

ಈ ಸಭೆಯಲ್ಲಿ ಮಾತನಾಡಿದ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಶರಣಬಸವ ಶಾಸ್ತ್ರಿಗಳು, ನಿರಂತರವಾಗಿ ಶ್ರೀಮಠದಲ್ಲಿ ರಾಜ್ಯಮಟ್ಟದ ಜನಪದ ಸಂಗೀತೋತ್ಸವ ಹಾಗೂ ಅಖಿಲ ಭಾರತ ವೇದಾಂತ ಪರಿಷತ್ತನ್ನು ಜಂಟಿಯಾಗಿ ನಡೆಸುತ್ತ ಬಂದಿದ್ದು ಈ ಬಾರಿ 10 ದಿನಗಳ ಕಾಲ ಸಂಗೀತೋತ್ಸವವನ್ನು ಆಯೋಜಿಸಲಾಗುವುದು ಎಂದರು.

ವಚನ ಸಾಹಿತ್ಯ ಪರಿಷತ್,  ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಪರಿಷತ್, ಬಸವ ಬಳಗ. ಕನಾ೯ಟಕ ರಾಜ್ಯ ಸವ೯ಕಲಾವಿದರ ಒಕ್ಕೂಟ, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನ.ಸೇರಿದಂತೆ ಜಿಲ್ಲೆಯ ವಿವಿಧ ಸಾಂಸ್ಕೃತಿಕ ಸಂಘಟನೆಗಳ ಸಹಯೋಗ ಸಹಕಾರದೊಂದಿಗೆ ಸಂಗೀತೋತ್ಸವ ನಡೆಸಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳನ್ನು. ಜಿಲ್ಲಾ ಉಸ್ತುವಾರಿ ಸಚಿವರನ್ನು. ಜಿಲ್ಲೆಯ ಶಾಸಕ. ಸಂಸದರನ್ನು ಈ ಕಾರ್ಯಕ್ರಮಕ್ಕೆ ಆಮಂತ್ರಿಸಲಾಗುವುದು. ಮತ್ತು ನಮ್ಮ ನಾಡಿನ ಶ್ರೇಷ್ಠ ಶಾಸ್ತ್ರೀಯ ಸಂಗೀತಗಾರರನ್ನು. ಜನಪದ ಸಂಗೀತ ಕಲಾವಿದರನ್ನು .ಜನಪದ ವಾದ್ಯ ಕಲಾವಿದರನ್ನು. ಸಾಹಿತಿಗಳನ್ನು. ಆಮಂತ್ರಿಸಲಾಗುವುದು. ಕವಿಗಳಿಂದ ಕವಿಗೋಷ್ಠಿಯನ್ನು ನಡೆಸಲಾಗುವುದು ಅಲ್ಲದೆ ಕಲೆ .ಸಾಹಿತ್ಯ. ಸಂಗೀತ. ರಂಗಭೂಮಿ. ಧಾರ್ಮಿಕ. ಸಾಮಾಜಿಕ.ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಕಲಾವಿದರಿಗೆ ಹಾಗೂ ಸಾಧಕರಿಗೆ [1] ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪುರಸ್ಕಾರ [2] ಆರೂಢ ಜ್ಯೋತಿ [3.] ಗುರು ಸೇವಾರತ್ನ.4] ಜನಪದ ಭೂಷಣ[5] ಸಮಾಜ ಸೇವಾ ರತ್ನ [6] ಸಮಾಜ ಸೇವಾ ಧುರೀಣ. [7] ಗಾನ ಗಾರುಡಿಗ.[8] ಭಜನಾ ಭಾಸ್ಕರ.[9] ಸ್ವರ ಸಾಮ್ರಾಟ. [10] ಜನಪದ ಜಂಗಮ.[11] ಸಾಧನಾ ಸಂಪ್ಪನ್ನ.[12][ಮಾಧ್ಯಮ ಮಿತ್ರ.[13] ಮಿನುಗು ತಾರೆ.[14] ಕನಕಶ್ರೀ.[15] ಬಸವಶ್ರೀ ಸದ್ಭಾವನ ಪ್ರಶಸ್ತಿ. ಸೇರಿದಂತೆ ವಿವಿಧ ಗೌರವಗಳನ್ನ ನೀಡಿ ಗೌರವಿಸಲಾಗುವುದು ಅಲ್ಲವೇ 10 ದಿನ ನಡೆಯುವ ಈ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರ ತಂಡಗಳಿಗೆ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಗುವುದು ಎಂದು ಶರಣಬಸವ ಶಾಸ್ತ್ರಿಗಳು ಹೇಳಿದರು.

ಜಾನಪದ.ಸಂಗೀತ.ಮುಂತಾದ ಕಲಾ ಸೇವೆಗೆ ಮತ್ತು ಪ್ರಶಸ್ತಿ ಪುರಸ್ಕಾರಗಳಿಗೆ ಜನವರಿ ಒಂದರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕೆಂದು ಹೇಳಿದರು. ಸಭೆಯ ಸಾನಿಧ್ಯವನ್ನು ಶಂಕರಾನಂದ ಶ್ರೀಗಳು ವಹಿಸಿದ್ದರು. ಹಿರಿಯರಾದ ಪಿಜಿ ಗಣಿ ಬಸಲಿಂಗಪ್ಪ ಬಡಿಗುಡದಾರ.ಸಂಗಪ್ಪ ಗಣಿ. ಬಸವರಾಜ ಬಳವಾಡ. ಈರಪ್ಪ ಗಣಿ. ಶಂಭು ಗಣಿ ಮುಂತಾದವರಿದ್ದರು . ಅಜಿ೯ ಸಲ್ಲಿಸುವ ವಿಳಾಸ – ಪ.ಪೂ ಶರಣಬಸವ ಶಾಸ್ತ್ರಿಗಳು ಶ್ರೀ ಸಿದ್ಧಾರೂಢ ಭಾರತಿ ಆಶ್ರಮ ಮುಗಳಖೋಡ. 587113.. ತಾ/ಮುಧೋಳ. ಜಿ./ಬಾಗಲಕೋಟೆ. ಹೆಚ್ಚಿನ ಮಾಹಿತಿಗಾಗಿ 9972682938. 9742915714 ಈ ಸಂಖ್ಯೆಗೆ ಸಂಪರ್ಕಿಸಲು ತಿಳಿಸಿದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group