- Advertisement -
ಮೂಡಲಗಿ – ತಾಲೂಕಿನ ಮೂಡಲಗಿ ರೂರಲ್ ವಲಯದ ಮುನ್ಯಾಳ ಕಾರ್ಯಕ್ಷೇತ್ರದ ” ಅಂಬಾಭವಾನಿ ” ಜ್ಞಾನ ವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಹನುಮಂತ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ, ಬೀದಿ ನಾಟಕ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.
“ಭರತ್” ಕಲಾ ತಂಡದವರು ಬಾಲ್ಯ ವಿವಾಹ, ವರದಕ್ಷಿಣೆ,ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಅನಕ್ಷರತೆ, ಶೌಚಾಲಯ ಬಳಕೆ, ನೀರಿನ ಮಿತ ಬಳಕೆ ಬಗ್ಗೆ, ಜ್ಞಾನವಿಕಾಸ ಯುಟ್ಯೂಬ್ ಚಾನೆಲ್ ಬಗ್ಗೆ ಮತ್ತು ಇತರೆ ಸಾಮಾಜಿಕ ಪಿಡುಗುಗಳ ಬಗ್ಗೆ ನಾಟಕ ಪ್ರದರ್ಶನ ಮಾಡುವ ಮೂಲಕ ಅರಿವು ಮೂಡಿಸಿದರು.
- Advertisement -
ಈ ಸಂದರ್ಭ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು, ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಒಕ್ಕೂಟದ ಅಧ್ಯಕ್ಷರು, ಊರಿನ ಗಣ್ಯರು, ಭರತ್ ಕಲಾ ತಂಡದವರು, ಸೇವಾ ಪ್ರತಿನಿಧಿ ಮತ್ತು ಜ್ಞಾನವಿಕಾಸ ಕೇಂದ್ರ ಸದಸ್ಯರು ಉಪಸ್ಥಿತರಿದ್ದರು.